Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಭಾರತ–ಬಾಂಗ್ಲಾ ಟೆಸ್ಟ್‌: ವಿಜಯ್‌ ಶತಕ, ಉತ್ತಮ ಸ್ಥಿತಿಯಲ್ಲಿ ಭಾರತ

ಹೈದರಾಬಾದ್‌: ಆರಂಭಿಕ ಮುರುಳಿ ವಿಜಯ್‌ ಅವರ ಅಮೋಘ ಶತಕದ ನೆರವಿನಿಂದ ಬಾಂಗ್ಲಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿ ಕಾಯ್ದುಕೊಂಡಿದೆ.

ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ಚಹಾ ವಿರಾಮದ ವೇಳೆಗೆ 3 ವಿಕೆಟ್‌ ಕಳೆದುಕೊಂಡು 246 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.

ಆರಂಭಿಕರಾದ ಕೆ.ಎಲ್‌.ರಾಹುಲ್‌ ಕೇವಲ 2 ರನ್‌ ಗಳಿಸಿ ಔಟಾದರು. ನಂತರ ಎರಡನೇ ವಿಕೆಟ್‌ಗೆ ಒಂದಾದ ಮುರುಳಿ ವಿಜಯ್‌ 107(156) ಹಾಗೂ ಚೇತೇಶ್ವರ ಪೂಜಾರ 83(177) ಜವಾಬ್ದಾರಿಯುತ ಆಟವಾಡಿದರು.

ಶತಕ ಬಾರಿಸಿದ ವಿಜಯ್‌ ಬಾಂಗ್ಲಾ ಬೌಲರ್‌ಗಳನ್ನು ಕಾಡಿದರು. ಶತಕದ ನಂತರ ಹೆಚ್ಚು ಹೊತ್ತು ನಿಲ್ಲದ ವಿಜಯ್‌, ತೈಜುಲ್‌ ಇಸ್ಲಾಂ ಅವರ ಎಸೆತದಲ್ಲಿ ವಿಕೆಟ್‌ ಕಳೆದುಕೊಂಡರು. ಇವರೊಂದಿಗೆ ಎಚ್ಚರಿಕೆ ಆಟವಾಡಿದ್ದ ಪೂಜಾರ, ಹಸನ್‌ ಮಿರಾಜ್‌ ಅವರ ಬೌಲಿಂಗ್‌ನಲ್ಲಿ ರಹಿಂ ಅವರಿಗೆ ಕ್ಯಾಚ್‌ ಇಟ್ಟು ಔಟಾದರು. ನಂತರ ಕ್ರೀಸ್‌ಗಿಳಿದ ನಾಯಕ ವಿರಾಟ್‌ ಕೊಹ್ಲಿ, ಅಜಿಂಕ್ಯಾ ರಹಾನೆ ಅವರೊಂದಿಗೆ ಇನಿಂಗ್ಸ್‌ ಕಟ್ಟುತ್ತಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಸರಣಿ ಗೆದ್ದು ಆತ್ಮವಿಶ್ವಾದಲ್ಲಿರುವ ಭಾರತ ತಂಡ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದೆ. ನಾಯಕನ ಬ್ಯಾಟಿಂಗ್‌ ನಿರ್ಧಾರಕ್ಕೆ ತಕ್ಕ ಆಟವಾಡುತ್ತಿರುವ ಬ್ಯಾಟ್ಸಮನ್‌ಗಳು ಬೃಹತ್‌ ರನ್‌ ಪೇರಿಸುವ ಸೂಚನೆ ನೀಡಿದ್ದಾರೆ.

ಸಂಕ್ಷಿಪ್ತ ಸ್ಕೋರ್: ಭಾರತ 246/3 (68ಓವರ್)
ಬ್ಯಾಟಿಂಗ್‌ :
ಕೆ.ಎಲ್‌. ರಾಹುಲ್‌ – 2 (4)
ಮುರುಳಿ ವಿಜಯ್‌ – 108 (160)
ಚೇತೇಶ್ವರ ಪೂಜಾರ – 83 (177)
ಕೊಹ್ಲಿ – 39* (56)
ರಹಾನೆ –7* (23)

ಬೌಲಿಂಗ್‌:

ತಸ್ಕಿನ್‌ ಅಹ್ಮದ್‌ – 31/1 (12)
ಹಸನ್‌ ಮಿರಾಜ್‌ – 70/1 (16)
ತೈಜುಲ್‌ ಇಸ್ಲಾಂ – 19/1 (11)

No Comments

Leave A Comment