ಮದುವೆಗೆ 3ದಿನವಿತ್ತು.. ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆತ್ಮಹತ್ಯೆಚಿಕ್ಕಮಗಳೂರು: ಹಸೆಮಣೆ ಏರಬೇಕಿದ್ದ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಐಟಿ)ಯ ಸಹಾಯಕ ಪ್ರಾಧ್ಯಾಪಕ ಪವನ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಎಐಟಿ ಕಾಲೇಜಿನ ಮೆಕಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪವನ್(29) ಅವರಿಗೆ ಜಿಲ್ಲಾ ಪಂಚಾಯಿತಿ ಇಂಜಿಯರ್ರೊಂದಿಗೆ ಮದುವೆ ನಿಶ್ಚಯವಾಗಿತ್ತು.ಇದೇ ಭಾನುವಾರ ಮದುವೆ ಮುಹೂರ್ತವೂ ನಿಗದಿಯಾಗಿತ್ತು. ಆದರೆ, ಪವನ್ ಬುಧವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಚಿಕ್ಕಮಗಳೂರಿನ ಬಾಣೂರು ಮೂಲದ ಪವನ್ ಕಾಲೇಜು ಸಮೀಪದ ಹೌಸಿಂಗ್ ಬೋರ್ಡ್ನಲ್ಲಿ ವಾಸವಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ವಿಷಯ ಹರಡುತ್ತಿದ್ದಂತೆ ಎಐಟಿ ಕಾಲೇಜಿನ ತರಗತಿಗಳು ಅರ್ಧಕ್ಕೆ ಮೊಟುಕುಗೊಂಡವು.