Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಸೇವಾ ತೆರಿಗೆ ಬಾಕಿ : ಟೆನಿಸ್‌ ಆಟಗಾತಿ ಸಾನಿಯಾ ಮಿರ್ಜಾಗೆ ಸಮನ್ಸ್‌

ಹೈದರಾಬಾದ್‌ : ಟೆನಿಸ್‌ ಆಟಗಾತಿ ಸಾನಿ ಮಿರ್ಜಾ ಸೇವಾ ತೆರಿಗೆ ಪಾವತಿಸದಿರುವುದಕ್ಕೆ ಅಥವಾ ತಪ್ಪಿಸಿಕೊಂಡಿರುವುದಕ್ಕೆ ಸಂಬಂಧಿಸಿ ಸೇವಾ ತೆರಿಗೆ ಇಲಾಖೆಯು ಆಕೆಗೆ ನೊಟೀಸ್‌ ಜಾರಿ ಮಾಡಿದೆ.

ಸೇವಾ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರು ಕಳೆದ ಪೆ.6ರಂದು ಸಾನಿಯಾ ಮಿರ್ಜಾಗೆ ನೊಟೀಸ್‌ ಜಾರಿ ಮಾಡಿದ್ದು ಫೆ.16ರಂದು ಖುದ್ದಾಗಿ ಇಲ್ಲವೇ ತನ್ನ ಅಧಿಕೃತ ಪ್ರತಿನಿಧಿಯ ಮೂಲಕ ತನ್ನ ಮುಂದೆ ಹಾಜರಾಗುವಂತೆ ಆದೇಶಿಸಿದ್ದಾರೆ.

1994ರ ಹಣಕಾಸು ಕಾಯಿದೆ ಹಾಗೂ ನಿಯಮಗಳಡಿ ನಿಮ್ಮಿಂದ ಸೇವಾ ತೆರಿಗೆ ಪಾವತಿಯಾಗದಿರುವುದಕ್ಕೆ ಅಥವಾ ತಪ್ಪಿಸಿಕೊಂಡಿರುವುದಕ್ಕೆ ಸಂಬಂಧಿಸಿ ನಿಮ್ಮ ವಿರುದ್ಧ ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಸಾನಿಯಾ ಮಿರ್ಜಾಗೆ ಜಾರಿಗೊಳಿಸಲಾಗಿರುವ ನೊಟೀಸ್‌ನಲ್ಲಿ ಹೇಳಲಾಗಿದೆ.

ತನಿಖೆಗೆ ಸಂಬಂಧಿಸಿದ ನಿಜಾಂಶಗಳು ಮತ್ತು ದಾಖಲೆತ್ರಗಳನ್ನು ನೀವು ಹೊಂದಿರುವುದಾಗಿ ನಾವು ಸಕಾರಣವಾಗಿ ತಿಳಿದಿದ್ದೇವೆ ಎಂಬುದಾಗಿ ನೊಟೀಸ್‌ನಲ್ಲಿ ಹೇಳಲಾಗಿದೆ.

No Comments

Leave A Comment