Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಮುಂಬೈ-ಗೋವಾ ಹೆದ್ದಾರಿಯಲ್ಲಿ ಕಾರು ಮರಕ್ಕೆ ಡಿಕ್ಕಿ: 7 ಮಂದಿ ದಾರುಣ ಸಾವು/Tragic accident: Seven pals from Mumbai die on the way to Goa

ಮುಂಬೈ: ವೇಗವಾಗಿ ಬರುತ್ತಿದ್ದ ಕಾರು ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಮೃತಪಟ್ಟು ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಕೊಂಕಣ್ ಪ್ರಾಂತ್ಯದ ರತ್ನಗಿರಿ ಜಿಲ್ಲೆಯ ಮುಂಬೈ-ಗೋವಾ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ. (ಸಾಂದರ್ಭಿಕ ಚಿತ್ರ)

ಮೃತಪಟ್ಟವರೆಲ್ಲಾ ಮುಂಬೈ ಮೂಲದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ 7.40ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು ಕಾರು ಗೋವಾ ಕಡೆಗೆ ಹೋಗುತ್ತಿತ್ತು. ಚಾಲಕ ನಿಯಂತ್ರಣ ತಪ್ಪಿದ್ದರಿಂದ ಕಾರು ರಸ್ತೆಬದಿಯಲ್ಲಿದ್ದ ಮರಕ್ಕೆ ಅಪ್ಪಳಿಸಿತು. ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನೆಲ್ಲಾ ರತ್ನಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಆಸ್ಪತ್ರೆಗೆ ತಲುಪುವ ಮುನ್ನ ಮೃತಪಟ್ಟಿದ್ದಾರೆ.

ಸಾವಿಗೀಡಾದವರನ್ನು ಪ್ರಶಾಂತ್ ಗೌರವ್, ಸಚಿನ್ ಸಾವಂತ್, ಅಕ್ಷಯ್ ಕರೇಕರ್, ಮಯೂರ್ ಪೆಡ್ನೆಕರ್, ನಿಹಾಲ್ ಕೊಲೆಕರ್, ಕೇದಾರ್ ಕೊಲೆಕರ್ ಮತ್ತು ವೈಭವ್ ಮಾನವೆ ಎಂದು ಗುರುತಿಸಲಾಗಿದೆ.

ರತ್ನಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Seven out of eight friends from Vile Parle and Malad who were headed to Goa were killed early this morning in an accident at Ratnagiri. The accident occurred around 8 am this morning.

The driver of the car was allegedly speeding and lost control of the car, which hit a tree along the road. The condition of the seventh friend is serious and he has been admitted to a local hospital.

The seven who lost their lives came from the Shivaji Nagar area of Vile Parle and from Malad. Prashant Gurav (31), Sachin Sawant (31), Mayur Belnekar (28), Kedar Todkar (26), Akshay Kelkar (24), Nihal Kotiyan (22), Vaibhav Manve (32) and Abhishek Kambli (23) were part of a social group called Lakshya. The group regularly involved itself in social activities.

On Tuesday night, the entire group of friends left for Goa in a Xylo. On Wednesday morning, when they reached Khanu in Ratnagiri, the driver of the car lost control and hit a tree by the roadside.

The impact was such that all the passengers, except for Abhishek, were brought dead to the local hospital. Abhishek is currently in critical condition and has been moved to a private hospital in Ratnagiri. The friends had planned to return on Sunday.

No Comments

Leave A Comment