Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

3700 ಕೋಟಿ ರೂ.ಆನ್‌ಲೈನ್‌ ಸ್ಕ್ಯಾಮ್‌: ಪೊಲೀಸರಿಂದ ಸನ್ನಿ ವಿಚಾರಣೆ

ನೋಯ್ಡಾ  : ಏಳು ಲಕ್ಷ ಅಮಾಯಕ ಜನರಿಗೆ ಹೊಸಬಗೆಯ ಆನ್‌ಲೈನ್‌ ವಂಚನೆಯಲ್ಲಿ 3,700 ಕೋಟಿ ರೂ. ಪಂಗನಾಮ ಹಾಕಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ನಟಿಯರಾದ  ಸನ್ನಿ ಲಿಯೋನ್‌ ಮತ್ತು ಆಮಿಷಾ ಪಟೇಲ್‌ ಅವರನ್ನು ವಿಚಾರಣೆ  ನಡೆಸಿರುವ ಬಗ್ಗೆ ವರದಿಯಾಗಿದೆ.

ಈಗಾಗಲೇ ಬಂಧನಕ್ಕೊಳಗಾಗಿರುವ ವಂಚನೆಯ ಕಿಂಗ್‌ ಪಿನ್‌ ಆನುಭವ್‌ ಮಿತ್ತಲ್‌ ಗ್ರೇಟರ್‌ ನೋಯ್ಡಾದಲ್ಲಿ  ನವೆಂಬರ್‌ 29 ರಂದು ಆಯೋಜಿಸಿದ್ದ  ಹೊಸ ಉದ್ದಿಮೆ ಇಂಟ್‌ಮಾರ್ಟ್‌ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಣಿಸಿಕೊಂಡಿದ್ದ ಸನ್ನಿ ಲಿಯೋನ್‌ ಮತ್ತು ಆಮಿಷಾ ಪಟೇಲ್‌ ಅವರನ್ನು  ಪೊಲೀಸರು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ. 

ಹೂಡಿಕೆದಾರರನ್ನು ಸೆಳೆಯುವ ಸಲುವಾಗಿ ಇಬ್ಬರು ಮಾದಕ ನಟಿಯರನ್ನು ಕರೆಸಿಕೊಂಡಿದ್ದು ಈ ಬಗ್ಗೆ ತನಿಖೆ ಮುಂದುವರಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ

No Comments

Leave A Comment