Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಕೈಟ್ ಸರ್ಫಿಂಗ್: ಶತಕೋಟಿ ಒಡೆಯ, ಸ್ನೇಹಿತ ರಿಚರ್ಡ್ ಬ್ರಾನ್ಸನ್ ಸೋಲಿಸಿದ ಬರಾಕ್ ಒಬಾಮಾ

ನ್ಯೂಯಾರ್ಕ್: ಹಲವು ವರ್ಷಗಳವರೆಗೆ ತಮ್ಮ ರಾಜಕೀಯ ವಿರೋಧಿಗಳನ್ನು ತಮ್ಮ ಕಾರ್ಯಶೈಲಿಗಳಿಂದ ದೂರವಿಟ್ಟಿದ್ದ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ  ಇದೀಗ ತಮ್ಮ ಸ್ನೇಹಿತ ಹಾಗೂ ಶತಕೋಟಿ ಒಡೆಯ ರಿಚರ್ಡ್ ಬ್ರಾನ್ಸನ್ ಅವರನ್ನು ಕೈಟ್ ಸರ್ಫಿಂಗ್ ಸ್ಪರ್ಧೆಯಲ್ಲಿ ಸೋಲಿಸಿದ್ದಾರೆ.

ವರ್ಜಿನ್ ಗ್ರೂಪ್ ಸ್ಥಾಪಕ ರಿಚರ್ಡ್ ಬ್ರಾನ್ಸರ್ ಅವರು ತಮ್ಮ ಬ್ಲಾಗ್ ನಲ್ಲಿ ಫೋಟೋ ಮತ್ತು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಬ್ರಿಟನ್ ನ ಅವರ ಖಾಸಗಿ ವರ್ಜಿನ್ ದ್ವೀಪದಲ್ಲಿ ನಡೆದ ಸ್ಪರ್ಧೆಯ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ.

ಹವಾಯಿ ಮೂಲದ ಒಬಾಮಾ ತಮ್ಮ ಅಧಿಕಾರಾವಧಿಯಲ್ಲಿ ಭದ್ರತೆಯ ಕಾರಣದಿಂದ ಸರ್ಫಿಂಗ್ ಮಾಡುವಂತಿರಲಿಲ್ಲ.

” ಅಧ್ಯಕ್ಷರಾಗುವುದಕ್ಕೆ ಸ್ವಲ್ಪ ದಿನ ಮೊದಲು ಹವಾಯಿಯ ಅಪಾಯಕಾರಿ ದ್ವೀಪದಲ್ಲಿ ಸರ್ಫಿಂಗ್ ಮಾಡುತ್ತಿದ್ದರು. ಅಹ್ಲಾದಕರ ಅಧಿವೇಶನ ಮುಗಿಸಿಕೊಂಡು ಬಂದ ನಂತರ ಅಂದು ತಮ್ಮ ಭದ್ರತಾ ತಂಡಗಳ ಜೊತೆ ಸರ್ಫಿಂಗ್ ಮಾಡಿದ್ದರು. ನಂತರ 8 ವರ್ಷಗಳವರೆಗೆ ಅವರಿಗೆ ಸರ್ಫಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಅವರಿಗೆ ಜಲಕ್ರೀಡೆ ಇಷ್ಟದ ವಿಷಯವಾಗಿತ್ತು.

ನಂತರ ಇದೀಗ ಅಧ್ಯಕ್ಷಾವಧಿ ಮುಗಿದು ವಿರಾಮರಾಗಿರುವ ಬರಾಕ್ ಒಬಾಮಾ ತಮ್ಮ ಸ್ನೇಹಿತನ ದ್ವೀಪಕ್ಕೆ ಜಲಕ್ರೀಡೆಯಾಡಲು ಮತ್ತೆ ಹೋಗಿದ್ದರು. ಜಲಕ್ರೀಡೆಯಲ್ಲಿ ಒಬಾಮಾ ರಿಚರ್ಡ್ ರನ್ನು  ಸೋಲಿಸಿದ್ದಾರೆ.

 ಕೈಟ್ ಸರ್ಫಿಂಗ್ ಆಟದ ಬಗ್ಗೆ ಅವರು ಬರೆದುಕೊಂಡಿದ್ದಾರೆ. ಒಬಾಮಾ ತಮ್ಮನ್ನು ಸೋಲಿಸಿ ಗೆದ್ದಿರುವುದು ಅತೀವ ಸಂತಸ ತಂದಿದೆ ಅವರನ್ನು ತಮ್ಮ ದ್ವೀಪಕ್ಕೆ ಕರೆತರುವುದು ದೊಡ್ಡ ಗೌರವವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಮೊನ್ನೆಯಷ್ಟೇ ಶೇರ್ ಮಾಡಿರುವ ರಿಚರ್ಡ್ ಬ್ರಾನ್ಸನ್ ವಿಡಿಯೋವನ್ನು 54,000 ಮಂದಿ ವೀಕ್ಷಿಸಿದ್ದು 10,000 ಲೈಕ್ ಗಳು ಬಂದಿವೆ. ಟ್ವಿಟ್ಟರ್ ನಲ್ಲಿಯೂ ಅವರು ವಿಡಿಯೋ ಷೇರ್ ಮಾಡಿದ್ದಾರೆ.

View image on Twitter
No Comments

Leave A Comment