Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಶಿಕ್ಷಣ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಿ- ದಿನಕರಬಾಬು

ಉಡುಪಿ: ಜಿಲ್ಲೆಯ ಹಲವೆಡೆಗಳಲ್ಲಿ ಆರೋಗ್ಯ ಇಲಾಖೆ ಡಾಕ್ಟರ್‍ಗಳು ಮತ್ತು ಎಎನ್‍ಎಮ್ ಗಳ ಕಾರ್ಯವೈಖರಿ ಬಗ್ಗೆ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ವಲಯದಲ್ಲಿ ಕೆಲವು ಜಿಲ್ಲಾ ಪಂಚಾಯತ್ ಸದಸ್ಯರ ವ್ಯಾಪ್ತಿಯಲ್ಲಿ ಶಿಕ್ಷಕರು,ಕ್ಷೇತ್ರ ಶಿಕ್ಷಣಾಧಿಕಾರಿಗಳು ಅತೃಪ್ತಿಕರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರು ಜಿಲ್ಲಾ ಪಂಚಾಯತ್‍ನ ಡಾ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಗಮನಸೆಳೆದರು.

ಸಿದ್ದಾಪುರದಲ್ಲಿ ಆರೋಗ್ಯ ಇಲಾಖೆಗೆ ವಾಹನ ಇಲ್ಲ;. ಈದು ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಇಲ್ಲ; ಸಬ್ ಸೆಂಟರ್‍ಗೂ ಹೋಗ್ತಾ ಇಲ್ಲ ಎಂದು ದಿವ್ಯಶ್ರೀ ಅಮೀನ್ ಮಿಯಾರು ಆಕ್ಷೇಪಿಸಿದರು. ಗೋಪಾಡಿ ಎಎನ್‍ಎಮ್ ಇಲ್ಲ;ಬೀಜಾಡಿ ಜನರಿಗೆ ಉಪಕೇಂದ್ರ ಅಗತ್ಯವಿದೆ. ಹೆಬ್ರಿ ಆರೋಗ್ಯ ಕೇಂದ್ರವನ್ನೇ ಮುಚ್ಚಿ ಇಲ್ಲಿನ ಡಾಕ್ಟರ್ ಸೇವೆ ನೀಡದ ಬಗ್ಗೆ ಸದಸ್ಯರಿಂದ ಅಸಮಾಧಾನವನ್ನು ಜ್ಯೋತಿ ಹರೀಶ್ ವ್ಯಕ್ತಪಡಿಸಿದರು. ನಿಟ್ಟೆಯಲ್ಲೂ ಪಿಪಿಪಿ ಮಾದರಿ ಬಗ್ಗೆ ಪ್ರಸ್ತಾವನೆ. ಶಿಲ್ಪಾ ಸುವರ್ಣ ಅವರು ಕಾಪುಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಕೋಟ್ಯಾನ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಅವರು, ಕೆಎ 20 ವಾಹನಗಳಿಗೆ ಟೋಲ್‍ನಿಂದ ರಿಯಾಯಿತಿ ನೀಡಲು ಜಿಲ್ಲಾ ಪಂಚಾಯತ್ ಸಭೆ ನಿರ್ಣಯ ಕೈಗೊಳ್ಳ ಬೇಕೆಂದು ಆಗ್ರಹಿಸಿದರು.

ಸುರೇಶ್ ಬಟವಾಡಿ ಅವರು, ಶೀರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೋಟ್ ನಿರ್ಮಾಣ ಅಕ್ರಮವಾಗಿ ನಡೆಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಸಮಯ ಮಿತಿಯೊಳಗೆ ಬೋಟ್ ಕಾಮಗಾರಿ ಮುಗಿಸಲು ಸೂಚಿಸುವಂತೆ ಆಗ್ರಹಿಸಿದರು.

ಬಸ್ ರೂಟ್ ಬಗ್ಗೆ ಸದಸ್ಯರಿಂದ ಇಂದೂ ಆಕ್ಷೇಪಗಳು ವ್ಯಕ್ತವಾಯಿತು. ಮಕ್ಕಳಿಗೆ, ಕಾರ್ಮಿಕರಿಗೆ ಬಸ್ ನ್ನು ರದ್ದು ಪಡಿಸುವುದರಿಂದ ಬಹಳಷ್ಟು ತೊಂದರಯಾಗಿದೆ ಎಂದು ಜನಾರ್ಧನ ತೋನ್ಸೆ ಹಾಗೂ ಸುಧಾಕರ ಶೆಟ್ಟಿ ಮೈರ್ಮಾಡಿ ಸಭೆಯ ಗಮನ ಸೆಳೆದರು. ಮಕ್ಕಳ ಸಮಸ್ಯೆಗೆ ಪರಿಹಾರ ಬೇಕೆಂದು ಒತ್ತಾಯಿಸಿದರು. ಪೆರ್ಡೂರಿನಲ್ಲಿರುವ ಶಾಲಾ ಮಕ್ಕಳಿಗೆ ತೊಂದರೆಯಾಗಿದೆ ಎಂದರು. ಈ ರೂಟ್ ಗೆ ಸರ್ಕಾರಿ ಬಸ್ ಓಡಿಸುವಂತೆ ಅವರು ಒತ್ತಾಯಿಸಿದರು. ಕುಂಟಾಲಕಟ್ಟೆ ಮುನಿಯಾಲುಗೆ ಬಸ್ ಬೇಕು ಎಂದು ಚಂದ್ರಿಕಾ ಕೇಲ್ಕರ್ ಆಗ್ರಹಿಸಿದರು.ಕುಂದಾಪುರ ಗಂಗೊಳ್ಳಿಗೆ ಎರಡು ಬಸ್ ಗ್ರಾಂಟ್ ಆಗಿದ್ದು ಆರ್ ಟಿ ಎ ಸಭೆಯಲ್ಲಿ ಫೆ. 16ರಂದು ಆದ್ಯತೆ ಮೇಲೆ ಸಮಯ ನಿಗದಿ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿ ಉತ್ತರಿಸಿದರು. ಕಾಪು ಮಜೂರು 3 ಬಸ್ ಸ್ಟಾಪ್ ಆಗಿ ಮೂರು ತಿಂಗಳಿಂದ ಬಸ್ಸಿಲ್ಲ ಎಂದು ಶಿಲ್ಪಾ ಸುವರ್ಣ ಸಭೆಯ ಗಮನಸೆಳೆದರು.

ಮಕ್ಕಳ ಮತ್ತು ಮಹಿಳೆಯರ ಗ್ರಾಮಸಭೆ ಕಾಟಾಚಾರಕ್ಕೆ ಆಗುತ್ತಿದೆ ಎಂದೂ ಸದಸ್ಯರು ಆಕ್ಷೇಪವೆತ್ತಿದ್ದರು.

ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗೆ ಸ್ಪಂದಿಸಿ; ಈ ಸಂಬಂದ ಒಂದು ನಿರ್ಣಯ ಅಂಗೀಕರಿಸಿ ಎಂದು ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ ಹೇಳಿದರು.

ನೇತಾಜಿ ನಗರದ ಬಸವ ವಸತಿಯೋಜನೆಯಡಿ ಮನೆಗಳಾಗಿದ್ದು, ನೀರಿಲ್ಲ ಎಂದು ಚಂದ್ರಿಕಾ ರಂಜನ್ ಕೇಲ್ಕರ್ ಗಮನಸೆಳೆದರು. ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷರು ತಮ್ಮ ವ್ಯಾಪ್ತಿಯಲ್ಲಿ ನಶಿಕ್ಷಕರಿಲ್ಲದ ಬಗ್ಗೆ, ಬಿ ಆರ್ ಪಿ ಇಲ್ಲದ ಬಗ್ಗೆ ಗಮನಸೆಳೆದರು
.
ಎಲ್ಲ ಸದಸ್ಯರಿಗೆ ಗೌರವಧನ ಹೆಚ್ಚಳಕ್ಕೆ ಸರ್ವಾನುಮತದ ನಿರ್ಣಯ ಮಂಡಿಸಲು ತೋನ್ಸೆ ಅವರು ವಿನಂತಿಸಿದರು. ಮಕ್ಕಳಿಗೆ ಶಾಲಾ ಸಮವಸ್ತ್ರ ಹಾಗೂ ಕೆಲವು ಶಾಲೆಗಳಿಗೆ ಬೈಸಿಕಲ್ ಸಿಗದ ಬಗ್ಗೆ ಸದಸ್ಯರು ಗಮನಸೆಳೆದರು.

ಶಶಿಕಾಂತ್ ಪಡುಬಿದ್ರೆ ಅವರು ಸಿ ಆರ್ ಝಡ್ ಬಗ್ಗೆ ಸ್ಪಷ್ಟನೆ ಕೇಳಿದರು. ಜಿಲ್ಲಾ ಪಂಚಾಯತ್ ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಇದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಸ್ವಾಗತಿಸಿ ಸಭೆ ನಡೆಸಿದರು. ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಸಭೆಯಲ್ಲಿದ್ದರು.

No Comments

Leave A Comment