Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

800 ಮೀ. ವಿಭಾಗಗಳಲ್ಲಿ ಬಿಎಸಿ ಸ್ಪರ್ಧಿಗಳ ಮಿಂಚು ಬಸವನಗುಡಿ ಈಜು ಕೇಂದ್ರದ ಪಾರಮ್ಯ

ಹುಬ್ಬಳ್ಳಿ: ಬೆಂಗಳೂರಿನ ಬಸವನಗುಡಿ ಈಜು ಕೇಂದ್ರ (ಬಿಎಸಿ)ದ ಈಜು ಗಾರರು ಮಂಗಳವಾರ ಇಲ್ಲಿನ ನಗರ ಪಾಲಿಕೆ ಈಜುಕೊಳದಲ್ಲಿ ಆರಂಭಗೊಂ ಡ ರಾಜ್ಯ ಒಲಿಂಪಿಕ್ಸ್‌ನ  ಮೊದಲ ದಿನದ ಸ್ಪರ್ಧೆಗಳಲ್ಲಿ ಪಾರಮ್ಯ ಮೆರೆದರು.

ದಿನದ ಮೊದಲ ಸ್ಪರ್ಧೆಯಾದ 800 ಮೀಟರ್ಸ್‌ನ ಪುರುಷರ ಮತ್ತು ಮಹಿಳೆಯರ ವಿಭಾಗಗಳೆರಡರಲ್ಲೂ ಮೊದಲ ಮೂರು ಸ್ಥಾನಗಳನ್ನು ಬಿಎಸಿ ಬಾಚಿಕೊಳ್ಳುವ ಮೂಲಕ ಭರ್ಜರಿ ಆರಂಭ ಪಡೆಯಿತು. ಪುರುಷರ ವಿಭಾಗ ದಲ್ಲಿ ಬಿಎಸಿಯ ಅವಿನಾಶ್ ಮಣಿ, ಓಂಕಾರ ಟಿ.ಎಚ್‌. ಲಿತೇಶ್ ಜಿ. ಗೌಡ ಹಾಗೂ ಮಹಿಳಾ ವಿಭಾಗದಲ್ಲಿ ಖುಷಿ ದಿನೇಶ್, ನಿಖಿತಾ ಎಸ್‌.ವಿ ಮತ್ತು  ಪ್ರೇಕ್ಷಾ ಎಚ್‌.ಎಂ. ಕ್ರಮವಾಗಿ ಮೊದಲ ಮೂರು ಪದಕಗಳಿಗೆ ಮುತ್ತಿಟ್ಟರು.

ಆದರೆ, ಪುರುಷರ 100 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಪುತ್ತೂರು ಈಜು ಕೇಂದ್ರದ ವೈಷ್ಣವ್‌ ಹೆಗ್ಡೆ , ಬಿಎಸಿಯ ಪೃಥ್ವಿ ಎಂ.  ಮತ್ತು ನಿಶಾಂತ್‌ ಎಂ. (ಮೂರನೇ ಸ್ಥಾನ) ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಕೊರಳಿಗೇರಿಸಿಕೊಂ ಡರು.  200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ ನಲ್ಲಿ  ಬೆಂಗಳೂರಿನ ಗ್ಲೋಬಲ್‌ ಈಜು ಕೇಂದ್ರದ ಹೇಮಂತ್ ಜೇನುಕಲ್  ಹಾಗೂ ನಿಶಾಂತ್‌ ಕುಮಾರ್ ಮೊದಲೆ ರಡು ಸ್ಥಾನ ಪಡೆದರೆ, ಬಿಎಸಿಯ ಸೌರಭ ವರ್ಣೇಕರ್ ತೃತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. 200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನ ಮಹಿಳೆಯರ ವಿಭಾಗದಲ್ಲಿ ಮತ್ತೆ ಅಧಿಪತ್ಯ ಸಾಧಿಸಿದ ಬಿಎಸಿ ಮೊದಲ ಮೂರು ಸ್ಥಾನಗಳನ್ನು ಬಾಚಿಕೊಂಡಿತು.

ಬಳಿಕ ನಡೆದ ಪುರುಷರ 4×200 ಫ್ರೀ ಸ್ಟೈಲ್ ಹಾಗೂ ಮಹಿಳೆಯರ 4×100 ಫ್ರೀ ಸ್ಟೈಲ್‌ನಲ್ಲಿ ಬಿಎಸಿ ಮೊದಲೆರಡು ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ಪುರುಷರ ವಾಟರ್ ಪೋಲೊದಲ್ಲಿ ಬೆಂಗಳೂರಿನ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್‌ ತಂಡ 10–4 ಪಾಯಿಂಟ್‌ಗಳಿಂದ ಸ್ವಿಮ್‌್ ಲೈಫ್‌ ವಿರುದ್ಧ ಜಯಗಳಿಸಿತು.

ಫಲಿತಾಂಶ ಇಂತಿವೆ: ಪುರುಷರ ವಿಭಾಗ: 800 ಮೀ. ಫ್ರೀಸ್ಟೈಲ್‌: ಅವಿನಾಶ್‌ ಮಣಿ (ಕಾಲ–9:19.05)–1, ಓಂ ಕುಮಾರ್‌ ಟಿ.ಎಚ್‌. (9:32.51)–2, ಲಿತೀಶ್ ಜಿ. ಗೌಡ ( 9:52.98)–3 (ಮೂವರೂ ಬಿಎಸಿ). 100 ಮೀ. ಫ್ರೀಸ್ಟೈಲ್‌: ವೈಷ್ಣವ್ ಹೆಗ್ಡೆ (ಪುತ್ತೂರು ಈಜು ಕೇಂದ್ರ – 1:10.70)–1, ಪೃಥ್ವಿ ಎಂ. (ಬಿಎಸಿ, 1:11.72)–2, ನಿಶಾಂತ್ ಎಸ್. (ಬಿಎಸಿ–1:13.76)–3. 200 ಮೀ. ಬ್ಯಾಕ್‌ಸ್ಟ್ರೋಕ್‌: ಹೇಮಂತ್‌ ಜೇನುಕಲ್ ವಿ.ಬಿ. (ಗ್ಲೋಬಲ್–2:20.17)–1, ನಿಶಾಂತ್ ಕುಮಾರ್ (ಗ್ಲೋಬಲ್‌– 2:23.14)–2, ಸೌರಭ ವರ್ಣೆಕರ್ (ಬಿಎಸಿ–2:26.19)–3. 4×200 ಫ್ರೀ ಸ್ಟೈಲ್: ಬಿಎಸಿ–ಎ ತಂಡ (ಓಂಕುಮಾರ್‌ ಟಿ.ಎಚ್, ಲಿತೇಶ್‌ ಜಿ. ಗೌಡ, ಪೃಥ್ವಿ ಎಂ. ಅವಿನಾಶ್‌ ಮಣಿ–8:10.67)–1, ಬಿಎಸಿ–ಬಿ (ಅನಿರುದ್ಧ ಎಚ್.ಎಂ, ಜಾಗೃತ್‌ ಅಮೋರಿ, ನಿಶಾಂತ್‌ ಎಸ್‌, ಎಸ್‌.ಎಂ. ಶಶಿಕಿರಣ್‌–9:19.67)–2, ಸ್ವಿಮ್ ಲೈಫ್‌ (ಭೂಷಿತ್‌ ರಾಜ್‌, ಪ್ರಜ್ವಲ್ ಎಂ.ಸಿ. ಮಣಿಕಾಂತ್ ಗೋಣಿ, ಸ್ಟೀಫನ್ ಸಂಜಯ್‌ ಸಿ.–13:49.85)–3.

ಮಹಿಳೆಯರ ವಿಭಾಗ: 800 ಮೀ. ಫ್ರೀಸ್ಟೈಲ್: ಖುಷಿ ದಿನೇಶ್‌ (9:53.88)–1, ನಿಖಿತಾ ಎಸ್.ವಿ. (10:04.64)–2, ಪ್ರೇಕ್ಷಾ ಎಚ್‌.ಎಂ. (10:07.13)–3,(ಮೂವರೂ ಬಿಎಸಿ). 100 ಮೀ. ಬ್ರೆಸ್ಟ್ ಸ್ಟ್ರೋಕ್: ಹರ್ಷಿತಾ ಜಯರಾಮ್‌ (ಗ್ಲೋಬಲ್‌–1:21.56)–1, ಶ್ರಿಯಾ ಆರ್. ಭಟ್‌ (ಬಿಎಸಿ–1:23.08)–2, ಪ್ರತೀಕ್ಷಾ ಪಟೇಲ್ (ಡಾಲ್ಫಿನ್–1:24.30)–3. 200 ಮೀ. ಬ್ಯಾಕ್‌ಸ್ಟ್ರೋಕ್: ಶ್ರಿಯಾ ಆರ್. ಭಟ್ (ಬಿಎಸಿ–2:44.34)–1, ಸಿಮ್ರಾನ್ ದೀಪಕ್‌್ ಮುಂಗೇಕರ್ (ಬಿಎಸಿ–2:47.89)–2, ಸಾಚಿ ಜಿ. (ಬಿಎಸಿ–2:48.85)–3. 4×100 ಮೀ. ಫ್ರೀಸ್ಟೈಲ್: ಬಿಎಸಿ–ಎ (ಪ್ರೇಕ್ಷಾ ಎಚ್.ಎಂ, ಖುಷಿ ದಿನೇಶ್, ನಿಖಿತಾ ಎಸ್‌.ವಿ, ಸ್ನೇಹಾ ಟಿ.–4:22.48)–1, ಬಿಎಸಿ–ಬಿ (ಸಾಚಿ ಜಿ, ಸ್ಮೃತಿ ಮಹಾಲಿಂಗಂ, ಮೈಯೂರಿ ಲಿಂಗರಾಜ್‌, ಪೂಜಿತ್ ಜಿ. ಮೂರ್ತಿ–4:25.05)–2.

No Comments

Leave A Comment