Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬೆಂಗಳೂರು ಹಿರಿಯ ಹವ್ಯಾಸಿ ಛಾಯಾಗ್ರಾಹಕ ಪೆರುಮಾಳ್‌ ನಿಧನ

ಬೆಂಗಳೂರು: 1955ರಲ್ಲಿ ಫೋಟೊಗ್ರಫಿ ಶುರು ಮಾಡಿದ ಪೆರುಮಾಳ್ ಅವರು ಬೆಂಗಳೂರು ಕಂಡ ಹಿರಿಯ ಹವ್ಯಾಸಿ ಛಾಯಾಗ್ರಾಹಕರು. ಅವರು ತಮ್ಮನ್ನು ತಾವು ‘ಛಾಯಾಚಿತ್ರಗಾರ’ ಎಂದು ಕರೆದುಕೊಳ್ಳುತ್ತಿದ್ದರು. ‘ಕ್ಯಾಮೆರಾ ನನ್ನ ಕುಂಚ, ಛಾಯಾಚಿತ್ರವೇ ನನ್ನ ಕಲೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಪೆರುಮಾಳ್‌ ಅವರು ಮಂಗಳವಾರ ರಾತ್ರಿ ನಿಧನರಾದರು.

ಇವರೇ ನೋಡಿ ಪೆರುಮಾಳ್ ಸಾರ್:
ಬೆಂಗಳೂರಿನಲ್ಲಿ ಕ್ಯಾಮೆರಾ ಹಿಡಿದ ಹವ್ಯಾಸಿಗಳ ಎದುರು ಪೆರುಮಾಳ್, ಟಿ.ಎನ್.ಎ.ಪೆರುಮಾಳ್ ಎಂದರೆ ‘ಯಾರವರು’ ಎನ್ನುತ್ತಾರೆ. ‘ಪೆರುಮಾಳ್ ಸಾರ್ ಗೊತ್ತೇನ್ರೀ’ ಎಂದರೆ, ‘ಅವರು ಗೊತ್ತಿಲ್ಲದ ಫೋಟೊಗ್ರಾಫರ್ ಬೆಂಗಳೂರಿನಲ್ಲಿ ಇದ್ದಾರಾ?’ ಎಂಬ ಪ್ರಶ್ನೆಯೇ ಉತ್ತರವಾಗಿರುತ್ತದೆ.

ಡಿಜಿಟಲ್ ಯುಗ ಕಾಲಿಡುವ ಮೊದಲೇ ಮ್ಯಾಕ್ರೋ ಫೋಟೊಗ್ರಫಿಯಲ್ಲಿ ಹಲವು ಪ್ರಯೋಗ ಮಾಡಿದ ಸೃಜನಶೀಲ ಮನಸು ಪೆರುಮಾಳ್ ಅವರದು. ‘ಎನ್‌ಕೌಂಟರ್ ಇನ್ ದಿ ಫಾರೆಸ್ಟ್’, ‘ಫೀಲ್ಡ್ ಗೈಡ್ ಫಾರ್ ಬಟರ್‌ಫ್ಲೈ’, ‘ದಿ ಡಾಯನ್ ಆಫ್ ನೇಚರ್ ಫೋಟೊಗ್ರಫಿ’ ಪೆರುಮಾಳ್ ಅವರ ಪ್ರಮುಖ ಕೃತಿಗಳು. ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಮಾಸ್ಟರ್ ಫೋಟೊಗ್ರಫಿಕ್ ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಆರ್ಟ್ ಫೋಟೊಗ್ರಫಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ.

No Comments

Leave A Comment