Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಯಾವುದೇ ಶಕ್ತಿಯಿಂದ ಪಕ್ಷದ ಒಗ್ಗಟ್ಟು ಮುರಿಯಲು ಸಾಧ್ಯವಿಲ್ಲ: ಶಶಿಕಲಾ

ಚೆನ್ನೈ: ಎಐಎಡಿಎಂಕೆ ಪಕ್ಷದ ಕಚೇರಿಯಲ್ಲಿ ಶಶಿಕಲಾ ನಟರಾಜನ್‌ ನೇತೃತ್ವದಲ್ಲಿ ನಡೆದ ಶಾಸಕರ ಸಭೆ ಪೂರ್ಣಗೊಂಡಿದೆ.

90ಕ್ಕೂ ಹೆಚ್ಚು ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು. ಅನೇಕರು ಕಾರ್ಯಕ್ಷೇತ್ರಗಳಿಗೆ ತೆರಳಿರುವ ಕಾರಣ ಸಭೆಯಲ್ಲಿ ಭಾಗಿಯಾಗಿಲ್ಲ ಎಂದು ಎಐಎಡಿಎಂಕೆ ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದ ಒಗ್ಗಟ್ಟನ್ನು ಯಾವುದೇ ಶಕ್ತಿಯಿಂದ ಒಡೆಯಲು ಸಾಧ್ಯವಿಲ್ಲ ಎಂದು ಎಐಎಡಿಎಂಕೆ ಪಕ್ಷ ಟ್ವೀಟ್‌ ಮಾಡಿದೆ.

ಶಾಸಕರ ಸಭೆಯಲ್ಲಿ ಶಶಿಕಲಾ ಅವರು ಪನ್ನೀರ್‌ಸೆಲ್ವಂ ವ್ಯಕ್ತಪಡಿಸಿರುವ ಬಂಡಾಯದ ಕುರಿತು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದರು ಎನ್ನಲಾಗಿದೆ. ಶಶಿಕಲಾ ಅವರು ಶಾಸಕಾಂಗ ಪಕ್ಷದ ನಾಯಕಿಯಾಗಿ ಮತ್ತೆ ಆಯ್ಕೆಯಾದಂತಾಗಿದೆ.

ಪಕ್ಷದ ಒಟ್ಟು 134 ಶಾಸಕರಿದ್ದು, ಅತಿ ಹೆಚ್ಚು ಶಾಸಕರ ಬೆಂಬಲ ಶಶಿಕಲಾ ಅವರಿಗೆ ಇದ್ದು, ಅವರೇ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪಕ್ಷದ ನಾಯಕರು ಮಾಹಿತಿ ನೀಡಿದರು.

ಶಾಸಕಾಂಗ ಸಭೆ ಮುಗಿದ ಬಳಿಕ ಶಶಿಕಲಾ ಅವರು ಪಕ್ಷದ ಕಾರ್ಯಕರ್ತರತ್ತ ಕೈಬೀಸಿ ನಗೆಬೀರಿದರು.

ಶಶಿಕಲಾ ನಟರಾಜನ್‌ ಅವರ ಪಕ್ಷದ ಪ್ರಧಾನ ಕಾರ್ಯದರ್ಶಿ ಆಯ್ಕೆಯನ್ನು ಚುನಾವಣಾ ಆಯೋಗ ಪ್ರಶ್ನಿಸಿದ್ದು, ನಿಯಮ ಉಲ್ಲಂಘನೆಯಾಗಿರುವ ಕುರಿತು ಆಯೋಗ ನೋಟಿಸ್‌ ಕಳಿಸಿರುವುದು ವರದಿಯಾಗಿದೆ.

No Comments

Leave A Comment