Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ನಾಲ್ಕರ ಬಾಲಕಿಯ ಅಪಹರಣ, ರೇಪ್‌: ದಿಲ್ಲಿ ಸೀರಿಯಲ್‌ ರೇಪಿಸ್ಟ್‌ ಸೆರೆ

ಹೊಸದಿಲ್ಲಿ : ಇಲ್ಲಿನ ರೋಹಿಣಿ ಪ್ರದೇಶದಲ್ಲಿನ ವಿಜಯ ವಿಹಾರ ಸಮೀಪ ನಾಲ್ಕು ವರ್ಷ ಪ್ರಾಯದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ದಿಲ್ಲಿ ಪೊಲೀಸರು ಸೀರಿಯಲ್‌ ರೇಪಿಸ್ಟ್‌, ಅಪರಾಧಿ 40 ವರ್ಷ ಪ್ರಾಯದ ನರೇಶ್‌ ಎಂಬಾತನನ್ನು ಬಂಧಿಸಿದ್ದಾರೆ.

ನಿನ್ನೆ ಬೆಳಗ್ಗೆ 11.12 ಗಂಟೆ  ಹೊತ್ತಿಗೆ ತನ್ನ ತಾಯಿಯ ಬಳಿಯಲ್ಲೇ ಆಟವಾಡುತ್ತಿದ್ದ ನಾಲ್ಕು ವರ್ಷ ಪ್ರಾಯದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ ಶಿಶು ಕಾಮುಕ ನರೇಶ್‌ನನ್ನು ಪೊಲೀಸರು ಬಂಧಿಸಿದರು. ನನ್ನ ಮಗಳು ತನ್ನ ಬಳಿಯೇ ಆಟವಾಡುತ್ತಿದ್ದಾಗ ಆರೋಪಿಯು ನನ್ನ ಮಗಳನ್ನು  ಅಪಹರಿಸಿಕೊಂಡು ಹೋದ ಎಂದು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಳು.

ಶಿಶು ಕಾಮಕ ನರೇಶನು ಬಾಲಕಿಯನ್ನು ಅಪಹರಿಸುತ್ತಿದ್ದಂತೆಯೇ ಬಾಲಕಿಯ ತಾಯಿ ಬೊಬ್ಬಿಟ್ಟಾಗ ನೆರೆಹೊರೆಯವರು ಕೂಡಲೇ ಧಾವಿಸಿ ಬಂದು ಬಾಲಕಿಯನ್ನು ರಕ್ಷಿಸಿ ಪೊಲೀಸರಿಗೆ ಫೋನ್‌ ಮಾಡಿ ವಿಷಯ ತಿಳಿಸಿ ನರೇಶನನ್ನು  ಅವರಿಗೆ ಒಪ್ಪಿಸಿದರು.

ಘಟನೆ ಸಂಬಂಧ ಪೊಲೀಸರು ಪೋಕ್‌ಸೋ ಕಾಯಿದೆಯಡಿ ನರೇಶನನ್ನು ಬಂಧಿಸಿದ್ದಾರೆ. ಈತ 2007ರಿಂದಲೇ ಈ ಬಗೆಯ ಅಪರಾಧಗಳನ್ನು ನಡೆಸುತ್ತಾ ಬಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಒಂದು ಪ್ರಕರಣದಲ್ಲಿ ಆತನಿಗೆ ಮೂರು ವರ್ಷಗಳ ಜೈಲು ಶಿಕ್ಷೆಯಾಗಿತ್ತು ಎಂದು ಪೊಲೀಸ್‌ ಡೆಪ್ಯುಟಿ ಕಮಿಷನರ್‌ ಎಂ ಎನ್‌ ತಿವಾರಿ ತಿಳಿಸಿದ್ದಾರೆ.

No Comments

Leave A Comment