Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಭಾರತದ 3 ಉಪಗ್ರಹ ಫೆ.15ಕ್ಕೆ 104 ಉಪಗ್ರಹಗಳ ಉಡಾವಣೆ: ಇಸ್ರೋ

ಬೆಂಗಳೂರು: ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಗೆ ಇಸ್ರೋ ಸಜ್ಜುಗೊಂಡಿದೆ.  ಫೆಬ್ರವರಿ 15ರಂದು ಉಪಗ್ರಹಗಳನ್ನು ಹೊತ್ತು ಪಿಎಸ್‌ಎಲ್‌ವಿ –ಸಿ 37 ರಾಕೆಟ್‌ ನಭಕ್ಕೆ ಜಿಗಿಯಲಿದೆ.

ಭೂವೀಕ್ಷಣಾ ಕಾರ್ಯ ನಡೆಸುವ ಅಮೆರಿಕ ಸಂಸ್ಥೆಯ 88 ಚಿಕ್ಕ ಉಪಗ್ರಹ(ಕ್ಯೂಬ್‌ಸ್ಯಾಟ್‌)ಗಳು ಕಕ್ಷೆ ಸೇರಲಿವೆ. ಕಾರ್ಟೋಸ್ಯಾಟ್–2, ಐಎನ್‌ಎಸ್‌–1ಎ ಹಾಗೂ ಐಎನ್‌ಎಸ್‌–1ಬಿ ಸೇರಿದಂತೆ ಭಾರತದ ಮೂರು ಉಪಗ್ರಹಗಳು ಮಾತ್ರ ಉಡಾವಣೆಗೊಳ್ಳಲಿವೆ.

ಈವರೆಗೂ ಜಗತ್ತಿನ ಯಾವುದೇ ಬಾಹ್ಯಾಕಾಶ ಸಂಸ್ಥೆ ಮಾಡಿರದ ಪ್ರಯತ್ನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮುಂದಾಗಿದೆ. ಏಕಕಾಲದಲ್ಲಿ ಒಂದೇ ರಾಕೆಟ್‌ ಮೂಲಕ ಒಟ್ಟು 104 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಬೃಹತ್‌ ಯೋಜನೆ ಕೈಗೊಂಡಿದೆ.
ಕಳೆದ ವರ್ಷ ಇಸ್ರೊ ಒಂದೇ ಬಾರಿಗೆ 22 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. 2014ರಲ್ಲಿ ರಷ್ಯಾ ಒಟ್ಟಿಗೆ 37 ಉಪಗ್ರಹಗಳನ್ನು ಹಾಗೂ ನಾಸಾ 29 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿರುವುದು ಈವರೆಗಿನ ದಾಖಲೆಯಾಗಿದೆ.

101 ವಿದೇಶಿ ಉಪಗ್ರಹ:
ಅಮೆರಿಕ, ಜರ್ಮನಿ, ಇಸ್ರೋಲ್‌, ಯುಎಇ, ನೆದರ್‌ಲ್ಯಾಂಡ್, ಬೆಲ್ಜಿಯಂ ಸೇರಿದಂತೆ ವಿದೇಶದ 101 ವಾಣಿಜ್ಯ ಉದ್ದೇಶಿತ ಉಪಗ್ರಹಗಳನ್ನು ಉಡಾವಣೆ ಒಳಗೊಂಡಿದೆ.

ಪಿಎಸ್‌ಎಲ್‌ವಿ–ಸಿ37 ಉಡಾವಣಾ ವಾಹಕ 1500 ಕೆ.ಜಿ. ತೂಕದ ಉಪಗ್ರಹಗಳನ್ನು ಹೊತ್ತೊಯ್ಯಲಿದೆ. ಈ ಮೂಲಕ ಇಸ್ರೋ ಹೊಸ ಮೈಲಿಗಲ್ಲು ತಲುಪಲಿದೆ.

2018 ರಲ್ಲಿ ಚಂದ್ರಯಾನ–2 ಮತ್ತು ಸೂರ್ಯನನ್ನು ಅಧ್ಯಯನ ಮಾಡಲು 2019ರಲ್ಲಿ ಆದಿತ್ಯಾ–ಎಲ್‌1 ಉಪಗ್ರಹಗಳ ಉಡಾವಣೆ ಇಸ್ರೊದ ಮುಂದಿನ ಯೋಜನೆಗಳಾಗಿವೆ.

No Comments

Leave A Comment