Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಶಿರಿಯಾರ ಗ್ರಾ.ಪಂ.ಅಧ್ಯಕ್ಷರಿಗೆ ಸದಸ್ಯರ ಅಸಹಕಾರ ; ಜಿ.ಪಂ.ಸಿಇಓ ಭೇಟಿ ಮಾಡಿದ ದಲಿತ – ದಮನಿತರ ನಿಯೋಗ

ಉಡುಪಿ : ಶಿರಿಯಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಯವರಿಗೆ ಗ್ರಾಮ ಪಂಚಾಯತ್ ಸದಸ್ಯರು ನೀಡುತ್ತಿರುವ ಅಸಹಕಾರ, ಮಾನಸಿಕ ಹಿಂಸೆ – ದೌರ್ಜನ್ಯ ಮತ್ತು ಅವರನ್ನು ಅಧ್ಯಕ್ಷರ ಹುದ್ದೆಯಿಂದ ಹೊರಗಿಡಲು,ಮಾಡಿರುವ ಹುನ್ನಾರದ ಕುರಿತು ಸೂಕ್ತ ನ್ಯಾಯ ಒದಗಿಸಬೇಕೆಂದು ದಲಿತ – ದಮನಿತರ ನಿಯೋಗವು, ಶನಿವಾರ ( ಫೆ,4-2016) ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಯಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.ಈ ಬಗ್ಗೆ ಸೂಕ್ತ ನ್ಯಾಯ ಒದಗಿಸಲು ಸಿಇಓ ಅವರು ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿತು .

1)ಪಂಚಾಯತ್ ನಲ್ಲಿ ನೆಡೆಸಲಾದ ಕಾಮಗಾರಿ , ಶೇಇಪ್ಪತ್ತೈದರ ನಿಧಿ ಬಳಕೆ ಹಾಗೂ ಹಣದ ವ್ಯವಹಾರದ ಬಗ್ಗೆ ತನಿಖೆಯಾಗಬೇಕು.

2)ಶ್ರೀಮತಿ ಜ್ಯೋತಿ ಯವರಿಗೆ ಆಡಳಿತ ನೆಡೆಸಲು ಸೂಕ್ತ ಅವಕಾಶ ಮಾಡಿಕೊಡಬೇಕು. ಎಂಬ ಬೇಡಿಕೆಯನ್ನು ಪ್ರಮುಖವಾಗಿ ಇಟ್ಟುಕೊಂಡ ನಿಯೋಗವುಈ ದಲಿತ ಮಹಿಳೆಗೆ ಅನ್ಯಾಯವಾದರೆ ನಮ್ಮ ಎಲ್ಲಾ ಸಂಘಟನೆಗಳ ಸಹಭಾಗಿತ್ವ ದಲ್ಲಿ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂಬ ಅಂಶಗಳಿರುವ ಮನವಿ ಪತ್ರವನ್ನು ಈ ಸಂದರ್ಭ ನೀಡಲಾಯಿತು.

ಮನವಿ ಸ್ವೀಕರಿಸಿದ. ಸಿಇಒ ಅವರು ತಾನು ಈ ಬಗ್ಗೆ ಸದಸ್ಯರು ಗಳ ಜೊತೆ ಚರ್ಚಿಸುತ್ತೇನೆ, ಮನವಿಯಲ್ಲಿರುವ ಅಂಶಗಳನ್ನು ಪರಿಶೀಲಿಸುವುದಾಗಿ ಮತ್ತು ಮುಂದಿನ ಜಿ.ಪಂ.ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದ ಸಂದರ್ಭದಲ್ಲಿ ಮನವಿಯ ಅಂಶಗಳನ್ನು ಸಭೆಯ ಗಮನಕ್ಕೆ ತಂದು ಪರಿಹಾರ ಕಲ್ಪಿಸಲು ಮುಂದಾಗುವುದಾಗಿ ಭರವಸೆ ನೀಡಿದರು.ನಿಯೋಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ( ರಿ.) , ಕ.ದ.ಸಂ.ಸ (ಅಂಬೇಡ್ಕರ್ ವಾದ) ,ದ.ದ.ಸ್ವಾಭಿಮಾನಿ ಹೋರಾಟ ಸಮಿತಿಯ ಮುಖಂಡರುಗಳಾದ ಸುಂದರ ಮಾಸ್ತರ್, ಶ್ಯಾಮರಾಜ ಬಿರ್ತಿ, ಸುಂದರ ಕಪ್ಪೆಟ್ಟು, ಪರಮೇಶ್ವರ ಉಪ್ಪೂರು,ನಾರಾಯಣ ಮಣೂರು, ವಾಸು ನೇಜಾರು,ಅಣ್ಣಪ್ಪ ಕೊಳಲಗಿರಿ,ಹುಸೇನ್ ಕೂಡಿ ಬೇಂಗ್ರೆ,ಪರ್ವೆಸ್,ಅಬ್ದುಲ್ ಅಜೀಜ್ ಉದ್ಯಾವರ, ವಿಠಲ ತೊಟ್ಟಂ, ಅನಂತ ಮಚ್ಚಟ್ಟು, ಶ್ಯಾಮ ಸುಂದರ್ ತೆಕ್ಕಟ್ಟೆ , ಅಧ್ಯಕ್ಷರಾದ ಜ್ಯೋತಿ ಮತ್ತಿತರರು ಜೊತೆಗಿದ್ದರು.

No Comments

Leave A Comment