Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

ಮಂಗಳೂರಿನ ಬಾರ್‌ನಲ್ಲಿ ಕ್ರಿಸ್‌ ಗೇಲ್‌! ಮುಗಿಬಿದ್ದ ಅಭಿಮಾನಿಗಳು

ಮಂಗಳೂರು : ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅವರು ಭಾನುವಾರ ಮಂಗಳೂರಿನ ಬಲ್ಮಠದಲ್ಲಿರುವ ವೈನ್ ಗೇಟ್ ನ smrin off ಸಂಸ್ಥೆಯ ಹೊಸ ಉತ್ಪನ್ನ ಬಿಡುಗಡೆ ಕಾರ್ಯಕ್ರಮಕ್ಕಾಗಿ ಆಗಮಿಸಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದರು.

ಗೇಲ್‌ ಅವರಿಗೆ ಆರತಿ ಬೆಳಗಿ, ಕುಂಕುಮ ಹಚ್ಚಿ ಸಾಂಪ್ರದಾಯಿಕವಾಗಿ ಸ್ವಾಗತ ನೀಡಲಾಯಿತು. ಇದೇ ವೇಳೆ ಗೇಲ್‌ ರೋಡ್‌ ಶೋ ನಡೆಸಿದರು.

ನೆಚ್ಚಿನ ಆಟಗಾರರನ್ನು ನೋಡಲು ನೂರಾರು ಜನ ಜಮಾವಣೆಗೊಂಡಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. 

No Comments

Leave A Comment