Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಶಿರಿಬೀಡು:ಅಪರಿಚಿತ ಗಂಡಸಿನ ಮೃತದೇಹ ಪತ್ತೆ

ಉಡುಪಿ: ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಶಿರಿಬೀಡು ತಾಲೂಕು ಕಚೇರಿಯ ಹಿಂದುಗಡೆ ವಾಸವಿರುವ ಶಂಕರ ಕುಲಾಲ್ ಎಂಬವರ ಬಾವಿಯಲ್ಲಿ ವಾಸನೆ ಬರುತ್ತಿದ್ದುದನ್ನು ಗಮನಿಸಿ ಬಾವಿಯನ್ನು ನೋಡಿದಾಗ ಸುಮಾರು 30 ರಿಂದ 35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯು ಸುಮಾರು 5.7 ಅಡಿ ಉದ್ದ ಇದ್ದು, ಕಪ್ಪು ಬಣ್ಣದ ಪ್ಯಾಂಟ್, ನೀಲಿ ಬಣ್ಣದ ಗೆರೆಗಳಿಗಿರುವ ಉದ್ದ ತೋಳಿನ ಶರ್ಟ್ ಹಾಗೂ ಕಂದು ಬಣ್ಣದ ಒಳಉಡುಪು ಧರಿಸಿರುತ್ತಾರೆ. ಬಲಗೈ ತೋಳಿನಲ್ಲಿ ಕಾಡಮಂಜ ಎಂಬುವುದಾಗಿಯೂ, ಎಡ ಕೈಯಲ್ಲಿ ಸಕ್ಯಪ್ಪ ಶಿವಳಿ ಮಂಜುನಾಥ ಎಂಬ ಹಚ್ಚೆ ಇದೆ.

ಮೃತ ದೇಹವನ್ನು ಉಡುಪಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು, ಸದರಿ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೇ ದೂರವಾಣಿ ಸಂಖ್ಯೆ 0820-2520444 ನ್ನು ಅಥವಾ ಜಿಲ್ಲಾ ಆಸ್ಪತ್ರೆಯ ದೂರವಾಣಿ ಸಂಖ್ಯೆ 0820-2520555 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ

No Comments

Leave A Comment