Log In
BREAKING NEWS >
ಮಂಗಳೂರು: ಮನೆಯೊಳಗೆ ನುಗ್ಗಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ನಸುಕಿನ ಜಾವ ಪಣಂಬೂರು ಬಳಿಯಲ್ಲಿ ನಡೆದಿದೆ.

ಕಾರ್ಟೂನ್ ವಿವಾದ; ಅಮೆರಿಕದ ‘ಸ್ವಾತಂತ್ರ್ಯದ ಪ್ರತಿಮೆ’ ಶಿರಚ್ಛೇದ ಮಾಡಿದ ಟ್ರಂಪ್!

ಬರ್ಲಿನ್: ಅಮೆರಿಕದ ಸ್ವಾತಂತ್ರ್ಯದ ಪ್ರತಿಮೆ ‘ಸ್ಟಾಚ್ಯೂ ಆಫ್ ಲಿಬರ್ಟಿ’ಯ ತಲೆ ಕಡಿದು ಕೈಯಲ್ಲಿ ಹಿಡಿದು ನಿಂತಿರುವ ರೀತಿಯಲ್ಲಿ ಅಮೆರಿಕದ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಟೂನ್ ಪ್ರಕಟಿಸಿ ಜರ್ಮನ್ ನಿಯತಕಾಲಿಕ ವಿವಾದ ಸೃಷ್ಟಿಸಿದೆ.

ಜರ್ಮನಿಯ ಡೆರ್ ಸ್ಪೀಗಲ್ ಎಂಬ ನಿಯತಕಾಲಿಕದಲ್ಲಿ ಈ ಕಾರ್ಟೂನ್ ಪ್ರಕಟವಾಗಿದೆ.

‘ಅಮೆರಿಕ ಮೊದಲು’ ಎಂಬ ಟ್ರಂಪ್ ನೀತಿಯನ್ನೇ ಈ ಕಾರ್ಟೂನ್‍‍ಗೆ ತಲೆಬರಹವಾಗಿ ನೀಡಲಾಗಿದೆ.

1980ರಲ್ಲಿ ಕ್ಯೂಬಾ ವಲಸೆಗಾರನಾಗಿ ಅಮೆರಿಕಕ್ಕೆ ಬಂದಿದ್ದ ಎಡಲ್ ರೋಡ್ಗಿಗಸ್ ಎಂಬ ಕಲಾವಿದ ಈ ಕಾರ್ಟೂನ್ ರಚಿಸಿದ್ದಾರೆ. ಪ್ರಸ್ತುತ ಕಾರ್ಟೂನ್‍ಗೆ ಜರ್ಮನಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಆದರೆ ನನ್ನ ಕಾರ್ಟೂನ್  ಅಮೆರಿಕದಲ್ಲಿನ ಅಧಿಕಾರ ಅವ್ಯವಸ್ಥೆಯನ್ನು ಬಿಂಬಿಸುತ್ತಿದೆ ಎಂದು ಎಡಲ್ ಕಾರ್ಟೂನ್‍ನ್ನು ಸಮರ್ಥಿಸಿಕೊಂಡಿದ್ದಾರೆ.

No Comments

Leave A Comment