Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಮಧುರೈನಲ್ಲಿ ಜಲ್ಲಿಕಟ್ಟು ವೀಕ್ಷಣೆಗೆ ಜನಸಾಗರ : 950 ಗೂಳಿಗಳು ಭಾಗಿ !

ಮಧುರೈ : ಭಾರಿ ಪ್ರತಿಭಟನೆಗಳ ಬಳಿಕ ಸುಪ್ರೀಂ ಕೋರ್ಟ್‌ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟಿನ ಮೇಲೆ ವಿಧಿಸಿದ ನಿರ್ಬಂಧ ತೆರವುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಅವನೀಪುರಂನಲ್ಲಿ  ಭರ್ಜರಿ ಜಲ್ಲಿಕಟ್ಟು ಕ್ರೀಡೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಯಲ್ಲಿ  ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ 900ಕ್ಕೂ ಹೆಚ್ಚು  ಗೂಳಿಗಳು ಪಾಲ್ಗೊಂಡಿವೆ. ಎಲ್ಲಾ ಗೂಳಿಗಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ಗೂಳಿ ಹಿಡಿಯುವ ರಿಗೆ ಸಮವಸ್ತ್ರಗಳನ್ನು ಕಡ್ಡಾಯಮಾಡಲಾಗಿದೆ.

ಮುನ್ನೆಚ್ಚರಿಕಾ ಕ್ರಮಗಳ ಅಂಗವಾಗಿ 500 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ಸ್ಥಳದಲ್ಲಿ ನಿಯೋಜಿಸಲಾಗಿದೆ. 20 ಅಂಬುಲೆನ್ಸ್‌ ಗಳನ್ನು ಸ್ಥಳದಲ್ಲಿರಿಸಲಾಗಿದೆ. ಸುತ್ತಮುತ್ತಲೂ ವಿಡಿಯೋ ಚಿತ್ರೀಕರಣ ನಡೆಸಲಾಗುತ್ತಿದೆ.

ತಮಿಳುನಾಡಿನ ಕಂದಾಯ ಸಚಿವ ಆರ್‌.ಬಿ.ಉದಯ್‌ಕುಮಾರ್‌ ಅವರು ಉಪಸ್ಥಿತತರಿದ್ದಾರೆ.ಸಾವಿರಾರು ಕ್ರೀಡಾಸಕ್ತರು ಜಮಾವಣೆಗೊಂಡಿದ್ದಾರೆ.

No Comments

Leave A Comment