Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಯುಪಿಎ-ಎನ್‍ಡಿಎ ಜಟಾಪಟಿಯಲ್ಲಿ ನಾನು ಫುಟ್‍ಬಾಲ್‍ನಂತೆ ಆಗಿದ್ದೇನೆ!-ವಿಜಯ ಮಲ್ಯ ಟ್ವೀಟ್

ನವದೆಹಲಿ: ಹಣಕಾಸು ವಂಚನೆ ಆರೋಪದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದ ನಂತರ ಮಾಧ್ಯಮಗಳು ಮತ್ತು ಕೇಂದ್ರೀಯ ತನಿಖಾ ಸಂಸ್ಥೆ ನನ್ನ ಮೇಲೆ ಮಾಡುತ್ತಿರುವ ಆರೋಪಗಳನ್ನು ನೋಡಿ ನಾನು ದಂಗಾಗಿದ್ದೀನಿ ಎಂದು ಮದ್ಯ ದೊರೆ ವಿಜಯ ಮಲ್ಯ ಹೇಳಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‍ಗಳನ್ನು ಮಾಡಿರುವ ಮಲ್ಯ ಸಿಬಿಐಗೆ ವ್ಯಾಪಾರ ಮತ್ತು ಹಣಕಾಸಿನ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.

ಸಿಬಿಐ ಆರೋಪಗಳನ್ನು ನೋಡಿ ನನಗೆ ಅಚ್ಚರಿಯಾಯಿತು. ಅದೆಲ್ಲವೂ ಸುಳ್ಳು ಆರೋಪಗಳು. ಪೊಲೀಸರ ಈ ತಂಡಕ್ಕೆ ವ್ಯಾಪಾರ ಮತ್ತು ಹಣಕಾಸಿನ ಬಗ್ಗೆ ಏನು ಗೊತ್ತು? ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

ಅದೇ ವೇಳೆ ದೂರಸಂಪರ್ಕ ಮಾಜಿ ಸಚಿವ ದಯಾನಿಧಿ ಮಾರನ್‌ ಮತ್ತು ಅವರ ಸಹೋದರನಿಗೆ ಸುಪ್ರೀಂಕೋರ್ಟ್ ಕ್ಲೀನ್‍ಚಿಟ್ ನೀಡಿರುವುದನ್ನು  ಉಲ್ಲೇಖಿಸಿದ ಮಲ್ಯ, ತನಿಖಾ ದಳ ಮಾರನ್ ಸಹೋದರರಿಗೆ ಹಾನಿ ಮಾಡಲು ಯತ್ನಿಸಿತು. ಆದರೆ ಸತ್ಯ ಗೆದ್ದಿದೆ.

ರಾಜಕೀಯ ಪಕ್ಷಗಳ ಗಿಮಿಕ್ ಆಟದ ನಡುವೆ ನನ್ನ ಹೆಸರು ಎಳೆದು ತರಲಾಗುತ್ತಿದೆ. ಮಾಧ್ಯಮಗಳು ಇಂಥಾ ವಿಷಯಗಳಲ್ಲಿ ತುಂಬಾ ಆಸಕ್ತಿ ವಹಿಸಿವೆ.

ಎನ್‍ಡಿಎ ಮತ್ತು ಯುಪಿಎ ನಡುವಿನ ಜಟಾಪಟಿಯಲ್ಲಿ ನಾನು ಫುಟ್‍ಬಾಲ್‍ನಂತೆ ಆಗಿದ್ದೀನಿ. ದುರುದೃಷ್ಟವಶಾತ್ ಇಲ್ಲ ರೆಫ್ರಿ ಇಲ್ಲ ಎಂದು ಮಲ್ಯ ಟ್ವೀಟಿಸಿದ್ದಾರೆ.

No Comments

Leave A Comment