ಬೈಕ್ ಮುಖಾಮುಖಿ ಡಿಕ್ಕಿ: ರಸ್ತೆ ಮಧ್ಯದಲ್ಲೇ ಬೈಕ್ ಸವಾರ ಸಜೀವ ದಹನವಿಜಯಪುರ: ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ರಸ್ತೆ ಮಧ್ಯದಲ್ಲೇ ಬೈಕ್ ಸವಾರ ಸಜೀವ ದಹನವಾದ ಘಟನೆ ವಿಜಯಪುರ ತಾಲೂಕಿನ ಅರಕೇರಿ ತಾಂಡಾ ಬಳಿ ನಡೆದಿದೆ.ರಮೇಶ ಸಿದ್ದಪ್ಪ ಕಾಂಬಳೆ (50) ಸಜೀವ ದಹನವಾದ ದುರ್ದೈವಿ. ಇನ್ನೊರ್ವ ಬೈಕ್ ಸವಾರ ಪ್ರಕಾಶ ಚವ್ಹಾಣ (28) ಗಂಭೀರವಾಗಿ ಗಾಯಗೊಂಡಿದ್ದಾರೆ.ರಮೇಶ ಕಾಂಬಳೆ ಬೈಕ್ ಮೇಲೆ ಸೀಮೆಎಣ್ಣೆ ತುಂಬಿದ್ದ ಡಬ್ಬಿ ಇಟ್ಟುಕೊಂಡು ಹೊರಟಿದ್ದರು. ಅಪಘಾತ ವೇಳೆ ಸೀಮೆಎಣ್ಣೆಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ರಮೇಶ ಅವರ ಮೈಮೇಲೆ ಸೀಮೆಎಣ್ಣೆ ಚೆಲ್ಲಿ ಅವರು ಸ್ಥಳದಲ್ಲಿ ಬೆಂಕಿಗೆ ಆಹುತಿಯಾಗಿದ್ದಾರೆ.ಘಟನೆಯಲ್ಲಿ ಎರಡೂ ಬೈಕ್ಗಳು ಹೊತ್ತಿ ಉರಿದಿವೆ. ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ