Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಒಡಿಶಾ: ನೆಲಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಪೊಲೀಸರ ಸಂಖ್ಯೆ 8ಕ್ಕೆ ಏರಿಕೆ

ಕೊರಪುಟ್ (ಒಡಿಶಾ): ಒಡಿಶಾದ ಕೋರಪುಟ್ ಜಿಲ್ಲೆಯ ಸುಂಕಿಯಲ್ಲಿ ಶಂಕಿತ ನಕ್ಸಲರು ನಿನ್ನೆ ನೆಲಬಾಂಬ್ ಸ್ಫೋಟಿಸಿದ್ದರಿಂದ ಮಡಿದ ಪೊಲೀಸ್ ಸಿಬ್ಬಂದಿ  ಸಂಖ್ಯೆ ಗುರುವಾರ 8ಕ್ಕೇರಿದ್ದು  5ಮಂದಿ ಗಾಯಗೊಂಡಿದ್ದಾರೆ.

ಈ ಘಟನೆ ನಿನ್ನೆ ಸಂಜೆ ನಡೆದಿದ್ದು, ಒಡಿಶಾ ರಾಜ್ಯ ಸೇನಾ ಪೊಲೀಸ್ ಇಲಾಖೆಯ 13 ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ವ್ಯಾನ್ ಮಾವೋವಾದಿಗಳು ನೆಲಬಾಂಬ್ ಇಟ್ಟಿದ್ದರಿಂದ ಗುಡ್ಡಗಾಡಿನ ರಸ್ತೆಯಲ್ಲಿ ಸ್ಫೋಟಗೊಂಡಿತು.

ಈ ಸ್ಫೋಟ, ಜಗದಲ್ಪುರ್-ವಿಶಾಖಪಟ್ನಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊರಪುಟ್ ಜಿಲ್ಲೆಯ ಸುಂಕಿಯಿಂದ 2 ಕಿಲೋ ಮೀಟರ್ ದೂರದಲ್ಲಿ ನಡೆದಿದೆ.

ಗಾಯಗೊಂಡವರನ್ನು ಕೊರಪುಟ್ ಮತ್ತು ವಿಶಾಖಪಟ್ನಂನ ಸರ್ಕಾರಿ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ಘಟನೆಗೆ ಇದು ಹೇಡಿಗಳ ಕೃತ್ಯ ಎಂದು ಬಣ್ಣಿಸಿದ್ದಾರೆ.

ಇದು ಮಾವೋವಾದಿಗಳ ಕೃತ್ಯವಿರಬಹುದೆಂದು ಬಲವಾಗಿ ಶಂಕಿಸಲಾಗಿದ್ದು,  ಕೇಸು ದಾಖಲಿಸುತ್ತೇವೆ ಎಂದು ಒಡಿಶಾ ಪೊಲೀಸ್ ಮಹಾ ನಿರ್ದೇಶಕ ಕೆ.ಬಿ.ಸಿಂಗ್ ತಿಳಿಸಿದ್ದಾರೆ.

No Comments

Leave A Comment