Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಈರುಳ್ಳಿ ವಾಹನದಲ್ಲಿ ಹೊಸನೋಟು!:4 ಕೋಟಿ ರೂ ಸಹಿತ ಮೂವರ ಸೆರೆ

ಬೆಂಗಳೂರು: ನಗರದ ಕೋಡಿಗೆ ಹಳ್ಳಿ ಬಳಿ ಈರುಳ್ಳಿ ವಾಹನಲ್ಲಿ ದಾಖಲೆಯಿಲ್ಲದ ಹಣವನ್ನು ಸಾಗಿಸುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ  ನಡೆಸಿ 4,27,800 ರೂಪಾಯಿ ಹಣದೊಂದಿಗೆ ಮೂವರನ್ನು  ಮಂಗಳವಾರ ಬಂಧಿಸಿದ್ದಾರೆ.

ಬಂಧಿತರು ಅಬ್ದುಲ್‌ , ಶಂಶುದ್ದೀನ್‌ ಮತ್ತು ಅಫ್ಜಲ್‌ ಎಂದು ತಿಳಿದು ಬಂದಿದೆ. ವಶಕ್ಕೆ ಪಡೆದ ಹಣದ ಪೈಕಿ 3 ಕೋಟಿಯಷ್ಟು  2000 ರೂಪಾಯಿ ಮುಖಬೆಲೆಯ ನೋಟುಗಳಾಗಿದ್ದು ಉಳಿದ ಹಣ 500 ರೂಪಾಯಿ ಮತ್ತು 100 ರೂಪಾಯಿ ಮುಖಬೆಲೆಯದ್ದು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. 

ಬಂಧಿತರ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಹಣ ಯಾರಿಗೆ ಸೇರಿದ್ದುದು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

No Comments

Leave A Comment