Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಪ್ರೊ. ರಾಮದಾಸ್ ಅಭಿನಂದನಾ ಸಮಿತಿ ರಚನೆ

ಉಡುಪಿ: ಹಿರಿಯ ವಿದ್ವಾಂಸ, ಸಾಹಿತಿ, ನಟ, ನಿರ್ದೇಶಕ ಪೂರ್ಣಪ್ರಜ್ಞಾ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ರಾಮದಾಸ್ ಅವರ ಅಭಿನಂದನೆಗೆ ಅವರ ಸಾಹಿತ್ಯಾಭಿಮಾನಿಗಳು, ಶಿಷ್ಯರು ಆಯೋಜಿಸಿದ್ದು ಇದಕ್ಕಾಗಿ ಅಭಿನಂದನಾ ಸಮಿತಿ ರಚಿಸಲಾಯಿತು.

ಹಿರಿಯ ಶಿಕ್ಷಣತಜ್ಞ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‍ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಸಮಿತಿಯ ಅಧ್ಯಕ್ಷರಾಗಿದ್ದು, ಪ್ರೊ. ರಾಧಾಕೃಷ್ಣ ಆಚಾರ್ಯ, ಎಸ್. ವಿ. ಭಟ್, ಶ್ರೀಮತಿ ಶೈಲಜಾ ಆರ್ ಹೆಗ್ಡೆ ಉಪಾಧ್ಯಕ್ಷರಾಗಿರುತ್ತಾರೆ.

ಪ್ರೊ. ಕೆ ಸದಾಶಿವ ರಾವ್ ಕಾರ್ಯದರ್ಶಿಯಾಗಿ ಮುರಲಿ ಕಡೆಕಾರ್ ಕೋಶಾಧಿಕಾರಿಯಾಗಿ ಆಯ್ಕೆಯಾದರು. ಸಮಿತಿಯಲ್ಲಿ ತಲ್ಲೂರು ಶಿವರಾಮ ಶೆಟ್ಟಿ, ಕೆ. ಗಣೇಶ್ ರಾವ್, ನಾರಾಯಣ ಎಂ. ಹೆಗಡೆ, ಪೃಥ್ವಿರಾಜ್ ಕವತ್ತಾರ್, ಶ್ರೀಮತಿ ಮೀರಾ ಭಟ್, ಶ್ರೀಮತಿ ಮೀನಾಲಕ್ಷಿಣಿ ಅಡ್ಯಂತಾಯ, ಶ್ರೀಮತಿ ವಿದ್ಯಾಲತಾ ಮತ್ತು ಶ್ರೀಮತಿ ದಿವ್ಯಶ್ರೀ ಹೆಗಡೆ ಸದಸ್ಯರಾಗಿರುತ್ತಾರೆ.

ಫೆಬ್ರವರಿ 26 ಭಾನುವಾರ ಎಂ. ಜಿ. ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ದಿನಪೂರ್ತಿ ಕಾರ್ಯಕ್ರಮದೊಂದಿಗೆ ಪ್ರೊ. ರಾಮದಾಸ್ ಅವರನ್ನು ಅಭಿನಂದಿಸಲು ಸಭೆ ತಿರ್ಮಾನಿಸಿತು. ಇದೇ ಸಂದರ್ಭದಲ್ಲಿ ಅವರ ಶ್ರೇಷ್ಠ ಕೃತಿ ‘ದಾಸಭಾರತ’ ಲೋಕಾರ್ಪಣಾಗೊಳ್ಳಿಲಿದೆ ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.

No Comments

Leave A Comment