Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಸಂಸತ್‌ನಲ್ಲಿ ಕುಸಿದು ಬಿದ್ದ ಇ.ಅಹ್ಮದ್‌; ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ: ಬಜೆಟ್‌ ಅಧಿವೇಶನದ ಮುನ್ನಾ ದಿನ ಮಂಗಳವಾರ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಭಾಷಣದ ವೇಳೆ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ ಹಿರಿಯ ನಾಯಕ, ಮಾಜಿ ವಿದೇಶಾಂಗ ಸಹಾಯಕ ಸಚಿವ ಇ.ಆಹ್ಮದ್‌ ಅವರು ಕುಸಿದು ಬಿದ್ದ ಘಟನೆ ನಡೆದಿದೆ.

ಕುಸಿದು ಬಿದ್ದು ಪ್ರಜ್ಞಾ  ಹೀನ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

79 ರ ಹರೆಯದ ಅಹ್ಮದ್‌ ಅವರು ಕೇರಳದಿಂದ ಲೋಕಸಭೆಯನ್ನು ಪ್ರತಿನಿಧಿಸುತ್ತಿದ್ದಾರೆ.

ಅಹ್ಮದ್‌ ಅವರ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಚಾರಿಸಿದ್ದಾರೆ.

No Comments

Leave A Comment