Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಪರಿಕ್ಕರ್ ಅಧಿಕಾರಾವಧಿಯಲ್ಲಿ ಯೋಧರ ಮೇಲೆ ದಾಳಿ ಹೆಚ್ಚು: ಶರದ್ ಪವಾರ್

ಣಜಿ: ಮನೋಹರ್ ಪರಿಕ್ಕರ್ ಅವರು ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಯೋಧರ ಮೇಲೆ ದಾಳಿಗಳು ಹೆಚ್ಚಾಗುತ್ತಿದ್ದು, ಯೋಧರ ಸುರಕ್ಷತೆಯನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳು ಸಾಧ್ಯವಾಗುತ್ತಿಲ್ಲ ಎಂದು ಎನ್’ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸೋಮವಾರ ಹೇಳಿದ್ದಾರೆ.

ವಾಸ್ಕೋ ಟೌನ್ ನಲ್ಲಿ ಆಯೋಜಿಸಿದ್ದ ರ್ಯಾಲಿಯೊಂದರಲ್ಲಿ ಮಾತನಾಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನಯಷ್ಟೇ ಮನೋಹರ್ ಪರಿಕ್ಕರ್ ಅವರ ಕಾರ್ಯವೈಖರಿ ಕುರಿತಂತೆ  ಕೊಂಡಾಡಿದ್ದರು. ಇದೀಗ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಪರಿಕ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಪರಿಕ್ಕರ್ ಅವರು ಅಧಿಕಾರಕ್ಕೆ ಬಂದ ನಂತರ ಸೇನಾ ಶಿಬಿರಗಳ ಮೇಲೆ ದಾಳಿ ಹೆಚ್ಚಾಗಿದೆ. ಅಲ್ಲದೆ, ಗಡಿ ಕಾಯುವ ಯೋಧರ ಸುರಕ್ಷತೆಯನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿಲ್ಲ. ಪಾಕಿಸ್ತಾನ ಸೈನಿಕರು ಸುಧೀರ್ಘವಾಗಿ ಸೇನಾ ಕೇಂದ್ರಗಳಮೇಲೆ ದಾಳಿ ಮಾಡುತ್ತಿದ್ದಾರೆ. ಆದರೆ, ಪ್ರಧಾನಮಂತ್ರಿಗಳು ಮಾತ್ರ 36 ಇಂಚು ಎದೆಯುಳ್ಳ ರಕ್ಷಣಾ ಸಚಿವರನ್ನು ಭಾರತ ಹೊಂದಿದ್ದು, ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ.

ಮೋದಿಗೆ ಚಿಂತೆ ಇಲ್ಲದಿರಬಹುದು. ಆದರೆ, ನಮಗಿದೆ ಎಂದು ಹೇಳಿದ್ದಾರೆ.ಯೋಧರ ಮೇಲೆ ದಾಳಿ ನಡೆದರೆ, ಆ ಬಗ್ಗೆ ನಾವು ಚಿಂತಿಸುತ್ತೇವೆ. ಏಕೆಂದರೆ, ನಮ್ಮ ಮನೆಯ ಯುವಕರು ಹಾಗೂ ಗ್ರಾಮದ ಯುವಕರು ಸೇನಾ ಪಡೆಗೆ ಸೇರ್ಪಡೆಗೊಂಡಿದ್ದಾರೆ. ಅವರ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದಾರೆ. ಯೋಧರ ಕಲ್ಯಾಣದ ಬಗ್ಗೆ ಸರ್ಕಾರ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಗಡಿ ಕಾಯುವ ಯೋಧರನ್ನು ರಕ್ಷಣೆ ಮಾಡದ ಸರ್ಕಾರ ಸಾಮಾನ್ಯ ಜನರನ್ನು ಹೇಗೆ ರಕ್ಷಣೆ ಮಾಡುತ್ತದೆ.

ಪರಿಕ್ಕರ್ ಅವರು ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿದ ಸೇನಾ ಕೇಂದ್ರಗಳ ಮೇಲೆ ಐದು ಬಾರಿ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರಿಗೆ ಸೇನಾ ಶಿಬಿರಗಳಿಗೆ ನುಗ್ಗಿ ನಮ್ಮ ಯೋಧರನ್ನು ಹತ್ಯೆ ಮಾಡುವ ಧೈರ್ಯ ಬಂದಿದೆ.ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಸೀಮತಿ ದಾಳಿ ನಡೆಸಿರುವುದು ಇದೇ ಮೊದಲ ಬಾರಿಗೆ ಎಂಬಂತೆ ಬಿಜೆಪಿ ಬಿಂಬಿಸುತ್ತಿದೆ. ಸೀಮಿತ ದಾಳಿ ನಡೆಸಿರುವುದನ್ನು ನಾನು ಒಪ್ಪಿತ್ತೇನೆ. ಆದರೆ, ಇದು ಇದೇ ಮೊದಲ ಬಾರಿಗೆ ಅಲ್ಲ. ಈ ಹಿಂದೆ ಸಾಕಷ್ಟು ಬಾರಿ ಸೀಮಿತ ದಾಳಿಯನ್ನು ನಡೆಸಲಾಗಿದೆ. ಪಾಕಿಸ್ತಾನದ ಬಾಯಿ ಮುಚ್ಚಿಸಲು ಸೇನೆ ಈ ವರೆಗೂ 50 ಬಾರಿ ಸೀಮಿತ ದಾಳಿಯನ್ನು ನಡೆಸಿದೆ. ಎಂದು ತಿಳಿಸಿದ್ದಾರೆ.

No Comments

Leave A Comment