Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಶನಿ ಇದ್ದಂತೆ: ಜನಾರ್ದನ ಪೂಜಾರಿ ಕಿಡಿ

ಬೆಂಗಳೂರು: ರಾಜ್ಯ ಸರ್ಕಾರದ ಕಾರ್ಯವೈಖರಿ ಹಾಗೂ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಎಸ್ ಎಂ ಕೃಷ್ಣ ರಾಜೀನಾಮೆ ನೀಡಿದ ಬೆನ್ನಲ್ಲೇ ಮಾಜಿ ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಎಸ್ ಎಂ ಕೃಷ್ಣ ಅವರ ರಾಜೀನಾಮೆಯಿಂದ ರಾಜ್ಯದಲ್ಲಷ್ಟೇ ಅಲ್ಲದೇ ರಾಷ್ಟ್ರಮಟ್ಟದಲ್ಲೂ ಪಕ್ಷಕ್ಕೆ ಗಂಡಾಂತರ ಎದುರಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಜನಾರ್ದನ ಪೂಜಾರಿ, ಕಾಂಗ್ರೆಸ್ ಪಕ್ಷ ಎಸ್ ಎಂ ಕೃಷ್ಣ ಅವರನ್ನು ನಡೆಸಿಕೊಂಡ ರೀತಿ ಸರಿ ಇಲ್ಲ ಎಂದು ಹೇಳಿದ್ದಾರೆ ಆದರೂ ಅವರು ಪಕ್ಷ ಬಿಡಬಾರದಿತ್ತು, ನಮ್ಮ ಜೊತೆಯಲ್ಲಿ ಹೋರಾಟ ಮಾಡಬೇಕಿತ್ತು ಎಂದು ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ, ಮುತ್ಸದ್ದಿ ರಾಜಕಾರಣಿ ಎಸ್ ಎಂ ಕೃಷ್ಣ ಅವರು ನಿನ್ನೆ ಹೇಳಿದ್ದೆಲ್ಲವೂ ಸತ್ಯ, ಆದರೆ ಅವರು ಪಕ್ಷ ಬಿಡಬಾರದಿತ್ತು. ನಮ್ಮ ಜೊತೆಯಲ್ಲಿದ್ದು ಹೋರಾಟ ನಡೆಸಬೇಕಿತ್ತು. ಪ್ರಕಾಶ್ ಹುಕ್ಕೇರಿ, ಜಾಫರ್ ಷರೀಫ್ ಸೇರಿದಂತೆ ಹಿರಿಯರು ಯಾರೂ ಸಹ ಪಕ್ಷ ಬಿಡಬಾರದು ಎಂದು ಪೂಜಾರಿ ಕರೆ ನೀಡಿದ್ದಾರೆ.

ಸಿದ್ದರಾಮಯ್ಯ ಕಾಂಗ್ರೆಸ್ ಗೆ ಶನಿ ಇದ್ದಂತೆ

ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿರುವ ಜನಾರ್ದನ ಪೂಜಾರಿ, ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಶನಿ ಇದ್ದಂತೆ, ಅವರ ದುರಹಂಕಾರ ಮಿತಿ ಮೀರಿದೆ. ಸಿಎಂ ದುರಹಂಕಾರಕ್ಕೆ ಹಿರಿಯರೆಲ್ಲರೂ ಸೇರಿ ಕಡಿವಾಣ ಹಾಕಬೇಕಿದೆ ಎಂದು ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

No Comments

Leave A Comment