Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಕೆನಡದ ಕ್ಯುಬೆಕ್‌ ಮಸೀದಿ ಮೇಲೆ ಗುಂಡಿನ ದಾಳಿ: ಐವರ ಹತ್ಯೆ/Canada: five killed in shooting at a mosque in Quebec city, PM Justin Trudeau condemns attack


ಕ್ಯುಬೆಕ್‌ : ಕೆನಡದ ಕ್ಯುಬೆಕ್‌ ನಗರದಲ್ಲಿನ ಮಸೀದಿಯೊಂದರ ಮೇಲೆ ನಡೆಸಲಾದ ದಾಳಿಯಲ್ಲಿ ಕನಿಷ್ಠ ಐವರು ಹತರಾಗಿ ಇತರ ಹಲವರು ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿವೆ.

ಕ್ಯುಬೆಕ್‌ ನಗರದ ಇಸ್ಲಾಮಿಕ್‌ ಸಾಂಸ್ಕೃತಿಕ ಕೇಂದ್ರದಲ್ಲಿ ಪ್ರಾರ್ಥನಾ ಸಭೆ ನಡೆಯುತ್ತಿದ್ದ ವೇಳೆ ಈ ಗುಂಡಿನ ದಾಳಿ ನಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖೀಸಿ “ದ ಗಾರ್ಡಿಯನ್‌’ ವರದಿ ಮಾಡಿದೆ.

ಘಟನೆ ನಡೆದ ವೇಳೆ ಸುಮಾರು 40 ಮಂದಿ ಮಸೀದಿಯೊಳಗೆ ಇದ್ದರು. ರೇಡಿಯೋ ಕೆನಡ ವರದಿಯ ಪ್ರಕಾರ ಆ ಹೊತ್ತಿಗೆ ಇಬ್ಬರು ಬಂದೂಕುಧಾರಿಗಳು ಮಸೀದಿಯನ್ನು ಪ್ರವೇಶಿಸಿ ಗುಂಡಿನ ದಾಳಿ ನಡೆಸಿದರು.

ಕ್ಯುಬೆಕ್‌ ಪ್ರಧಾನಿ ಫಿಲಿಪ್‌ ಕ್ವಿಲಾರ್ಡ್‌ ಅವರು ಘಟನೆಯ ಬಗ್ಗೆ ಸರಣಿ ಟ್ವೀಟ್‌ ಮಾಡಿದ್ದು  ಕ್ಯುಬೆಕ್‌ ನಗರವಾಸಿಗಳ ಭದ್ರತೆಯನ್ನು ಬಿಗಿ ಗೊಳಿಸಲು ಇನ್ನಷ್ಟು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಇಸ್ಲಾಮಿಕ್‌ ಕಲ್ಚರಲ್‌ ಸೆಂಟರ್‌ ಎನ್ನುವುದು ಕ್ಯುಬೆಕ್‌ ನಗರದ ಭಾರೀ ದೊಡ್ಡ ಮಸೀದಿಯಾಗಿದೆ. ಕಳೆದ ರಮ್ಜಾನ್‌ ಪವಿತ್ರ ತಿಂಗಳಲ್ಲಿ  ದುಷ್ಕರ್ಮಿಗಳು ಈ ಮಸೀದಿಯ ಪ್ರವೇಶ ದ್ವಾರದಲ್ಲಿ ಸತ್ತ ಹಂದಿಯನ್ನು ಎಸೆದು ಹೋಗಿದ್ದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕಳೆದ ಶುಕ್ರವಾರ ಮುಸ್ಲಿಂ ವಲಸಿಗರು ಮತ್ತು ನಿರಾಶ್ರಿತರ ಮೇಲೆ ಹೇರಿದ್ದ ವಿವಾದಾತ್ಮಕ ನಿಷೇಧವನ್ನು ಅನುಸರಿಸಿ ಕೆನಡ, ತಾನು ಮುಸ್ಲಿಮರು ಮತ್ತು ನಿರಾಶ್ರಿತರಿಗೆ ತೆರೆದ ಬಾಗಿಲಿನ ಸ್ವಾಗತ ನೀಡುವುದಾಗಿ ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಈ ಘಟನೆ ನಡೆದಿದೆ.

At Least five people were killed after gunmen fired multiple shots at a gathering inside a mosque during evening prayers in Canada’s Quebec city.

Canadian Prime Minister described the attack as a cowardly act  and extended condolence to the victims.

Two suspects have been arrested. Police put up a security perimeter around the mosque and declined to comment to reporters about the incident.

Quebec City Islamic Cultural Centre President Mohamed Yangui reported the number of dead late Sunday in a telephone call from the provincial capital.  Yangui said the shooting happened in the men’s section of the mosque.

He said five males had died and he worried that some were children. He said he wasn’t at the center when the attack occurred but he got some details from people on the scene.  He said an estimated 60-100 people would have been there at the time of the shooting. “We are sad for the families,” he said.

Earlier, a witness told news agency Reuters that up to three gunmen fired on about 40 people inside the Quebec City Islamic Cultural Center.

The centre’s Facebook page posted video of police outside the scene, with a written comment that there are “some dead”.

The director of the centre said at least five people were killed, but that information has not been confirmed by police.

No Comments

Leave A Comment