Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಕಾಳು ಮೆಣಸು ಕೊಯ್ಯುತ್ತಿದ್ದ ವೇಳೆ ವಿದ್ಯುತ್ ಅವಘಡ: ಮಂಗಳೂರಿನಲ್ಲಿ ಒಂದೇ ಕುಟುಂಬದ ಮೂವರ ಸಾವು!

ಮಂಗಳೂರು: ಭೀಕರ ವಿದ್ಯುತ್ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಮಂಗಳೂರಿನ ಉಜ್ಜೋಡಿಯಲ್ಲಿ ನಡೆದಿದೆ.

ಉಜ್ಜೋಡಿ ನಿವಾಸಿಗಳಾದ ವಲೇರಿಯನ್ ಲೋಬೊ(55) ಹಾಗೂ ಅವರ ಪತ್ನಿ ಹೆಸ್ಮಿ ಲೋಬೊ(51) ಮತ್ತು ಮೂಡುಬಿದಿರೆಯ ಸಂದೀಪ್(28) ಎಂಬುವವರು ಸಾವನ್ನಪ್ಪಿದ್ದು, ತೆಂಗಿನ ಮರಕ್ಕೆ ಹಾಕಿದ್ದ ಕಬ್ಬಿಣದ ಏಣಿ ಹತ್ತುವಾಗ ಈ  ಘಟನೆ ಸಂಭವಿಸಿದೆ.

ಸ್ಥಳೀಯರು ತಿಳಿಸಿರುವಂತೆ ಮನೆಯ ಅಂಗಳದಲ್ಲಿರುವ ತೆಂಗಿನ ಮರಕ್ಕೆ ಹಾಕಿದ್ದ ಕಬ್ಬಿಣದ ಏಣಿ ಹತ್ತಿದ ಸಂದೀಪ್ ಕಾಳು ಮೆಣಸು ತೆಗೆಯಲು ಆರಂಭಿಸಿದ್ದಾರೆ. ಈ ವೇಳೆ ಏಣಿ ಆಯತಪ್ಪಿ ಮನೆಯ ಸಮೀಪದಲ್ಲಿ ಹಾದು ಹೋಗಿದ್ದು  ಹೈಟೆನ್ಷನ್ ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಆಗ ವಿದ್ಯುತ್ ಪ್ರವಹಸಿದ್ದು, ಸಂದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕೆಳಗೆ ಏಣಿ ಹಿಡಿದಿದ್ದ ವಲೇರಿಯನ್ ಲೋಬೋ ಅವರಿಗೂ ವಿದ್ಯುತ್ ಪ್ರವಹಸಿದ್ದು, ಅವರನ್ನು ಕಾಪಾಡಲು ಬಂದ  ಅವರ ಪತ್ನಿ ಹೆಸ್ಮಿ ಲೋಬೋ ಅವರೂ ಕೂಡ ವಿದ್ಯುತ್ ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.

ಉಜ್ಜೋಡಿಯಲ್ಲಿ ಮನೆಯ ಸಮೀಪದಲ್ಲಿಯೇ ಹೈ ಟೆನ್ಷನ್ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಸ್ಥಳೀಯ ವಿದ್ಯುತ್ ಇಲಾಖೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ.

No Comments

Leave A Comment