Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕ ನಿರ್ಬಂಧ: ಟ್ರಂಪ್ ವಿರುದ್ಧ ಭುಗಿಲೆದ್ದ ಪ್ರತಿಭಟನೆ

ನ್ಯೂಯಾರ್ಕ್: ಇಸಿಸ್ ಉಗ್ರರನ್ನು ರಾಷ್ಟ್ರದಿಂದ ಹೊರಗಿಡುವ ಉದ್ದೇಶದಿಂದ ಮುಸ್ಲಿಮರ ವಿರುದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಠಿಣ ನಿರ್ಧಾರವೊಂದನ್ನು ಕೈಗೊಂಡಿದ್ದು, ಟ್ರಂಪ್ ಅವರ ಈ ನಿರ್ಧಾರ ಜಾಗತಿಕವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಟ್ರಂಪ್ ವಿರುದ್ದದ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ.ಇಸ್ಲಾನಿಕ್ ಉಗ್ರರನ್ನು ನಿಯಂತ್ರಿಸುವ ಉದ್ದೇಶದಿಂದ ಟ್ರಂಪ್ ಅವರು ನಿನ್ನೆಯಷ್ಟೇ ವಿವಾದಾತ್ಮಕ ಆದೇಶಕ್ಕೆ ಸಹಿ ಹಾಕಿದ್ದರು.

ಆದೇಶದಂತೆ ಅಮೆರಿಕ ರಾಷ್ಟ್ರಕ್ಕೆ ಹೋಗಲು ಬಯಸುವ ಇರಾನ್, ಇರಾಕ್, ಸುಡಾನ್, ಲಿಬಿಯಾ, ಯೆಮೆನ್ ಮತ್ತು ಸೊಮಾಲಿಯಾ ನಾಗರಿಕರು ಹಲವು ಸುತ್ತಿನ ತಪಾಸಣೆ ಮತ್ತು ಕಠಿಣ ಶರತ್ತುಗಳಿಗೆ ಒಳಪಡಬೇಕಾಗುತ್ತದೆ. ಸರಿಯಾದ ನಾಗರೀಕರಿಗೆ ಮುಂದಿನ ಆದೇಶದ ವರೆಗೆ ಪೂರ್ಣ ನಿಷೇದವನ್ನು ವಿಧಿಸಲಾಗಿದೆ.ಅಧ್ಯಕ್ಷೀಯ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯಂತೆಯೇ ಟ್ರಂಪ್ ಅವರು ಒಂದೊಂದಾಗಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗುತ್ತಿದ್ದು, ಮೆಕ್ಸಿಕೋ ಗಡಿಯಲ್ಲಿನ ಅಕ್ರಮ ವಲಸೆ ತಪ್ಪಿಸಲು ಗೋಡೆ ಕಟ್ಟುವ ನಿರ್ಧಾರದ ನಂತರ ಪ್ರಕಟಿಸಿದ ಎರಡನೇ ವಿವಾದಾತ್ಮಕ ನಿರ್ಧಾರ ಇದಾಗಿದೆ.

ಟ್ರಂಪ್ ಅವರ ಈ ಆದೇಶ ಮುಸ್ಲಿಮೇತರ ರಾಷ್ಟ್ರಗಳ ವಲಸಿಗರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಟ್ರಂಪ್ ಆದೇಶ ಹೊರಡಿಸುತ್ತಿದ್ದಂತೆ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿದ್ದ ಮುಸ್ಲಿಂ ಪ್ರಜೆಗಳನ್ನು ಅಲ್ಲಿನ ಭದ್ರತಾ ಸಿಬ್ಬಂದಿಗಳು ತಡೆಹಿಡಿದಿದ್ದಾರೆ. ಇದರಿಂದ ತಬ್ಬಿಬ್ಬಾದ ಜನರು ಟ್ರಂಪ್ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.ವಿಮಾನ ನಿಲ್ದಾಣದಿಂದ ಬರುತ್ತಿದ್ದಂತೆ ಮುಸ್ಲಿಮೇತರ ರಾಷ್ಟ್ರಗಳ ಪ್ರಜೆಗಳ ಮೇಲೆ ನಿರ್ಬಂಧ ಹೇರಿ ವಶಕ್ಕೆ ಪಡೆಯಲಾಯಿತು. ನಮಗೆ ಬೇರಾವುದೇ ದಾರಿಯಿರಲಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.ಪ್ರಯಾಣಿಕ ಯೋಸ್ರೆ ಘಲೆಡ್ (25) ಮಾತನಾಡಿ, ಬೇರೆ ಬೇರೆ ದೇಶಗಳಿಂದ ಬಂದ ಸಾಕಷ್ಟು ಜನರು ನಿಲ್ದಾಣದಲ್ಲಿ ನಿಂತು ತಬ್ಬಿಬ್ಬಾಗಿದ್ದು, ನಿರ್ಬಂಧ ಹೇರಿರುವ ಅಧಿಕಾರಿಗಳು ನಮ್ಮನ್ನು ಮತ್ತೆ ಅದೇ ವಿಮಾನಗಳಲ್ಲಿ ಹಿಂದಕ್ಕೆ ಕಳುಹಿಸಬೇಕಿತ್ತು ಎಂದು ಹೇಳಿದ್ದಾರೆ.ನನ್ನ ಅತ್ತೆಯ ಸಹೋದರಿ ಯೆಮೆನ್ ನಾಗರೀಕರಾಗಿದ್ದು, ಸಕ್ಕರೆ ಕಾಯಿಲೆ, ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸೌದಿ ಅರೇಬಿಯಾದಿಂದ ಅಮೆರಿಕಾಗೆ ಬಂದಿದ್ದೆವು.

ಈ ವೇಳೆ ಭದ್ರತಾ ಸಿಬ್ಬಂದಿಗಳು ನಮ್ಮನ್ನು ತಡೆಹಿಡಿದರು. ಅವರ ಕೊನೆ ದಿನಗಳಾದರೂ ಸಂತೋಷದಿಂದ ಕಳೆಯುವಂತೆ ಮಾಡುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಜೊತೆಯಲ್ಲಿ ಅವರು ಸಮಯ ಕಳೆಯಬೇಕೆಂದು ಸಾಕಷ್ಟು ವರ್ಷಗಳಿಂದ ಕನಸು ಕಟ್ಟಿದ್ದೆವು. ಆದರೆ, ಇದೀಗ ಅದು ಸಾಧ್ಯವಾಗದೆ ಇರುವುದು ನಿಜಕ್ಕೂ ನಮಗೆ ಬಹಳ ಬೇಸರವನ್ನುಂಟು ಮಾಡಿದೆ ಎಂದು ಯೋಸ್ರೆ ಘಲೆಡ್ ಹೇಳಿಕೊಂಡಿದ್ದಾರೆ.ಇಬ್ಬರು ಇರಾಕ್ ದೇಶದ ಪ್ರಜೆಗಳೊಂದಿಗೆ ಈ ಹಿಂದೆ ಅಮೆರಿಕ ಸೇನೆ ಒಪ್ಪಂದ ಮಾಡಿಕೊಂಡಿತ್ತು.

ಇದರಂತೆ ಅಮೆರಿಕಾಗೆ ಬರಲು ಅವರಿಗೆ ಅನುಮತಿಯನ್ನು ನೀಡಿತ್ತು. ಆದರೆ, ಟ್ರಂಪ್ ಆದೇಶದ ಹಿನ್ನಲೆಯಲ್ಲಿ ಈ ಇಬ್ಬರನ್ನೂ ಭದ್ರತಾ ಸಿಬ್ಬಂದಿಗಳು ತಡೆಹಿಡಿದ್ದರು.ಟ್ರಂಪ್ ಅವರ ಈ ಕಠಿಣ ಆದೇಶ ನಿರಾಶ್ರಿತರಿಗೆ ಸಾಕಷ್ಟು ನೋವುಂಟು ಮಾಡಿದ್ದು, ನಿನ್ನೆ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಸ್ಥಳೀಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಸೇರಿ ಪ್ರತಿಭಟನೆ ನಡೆಸಿದರು.

No Comments

Leave A Comment