Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕುಪ್ವಾರದಲ್ಲಿ ಹಿಮಪಾತ: ಐವರು ಯೋಧರು ನಾಪತ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ಕರ್ತವ್ಯನಿರತ ಐವರು ಯೋಧರು ನಾಪತ್ತೆಯಾಗಿರುವುದಾಗಿ ಶನಿವಾರ ತಿಳಿದುಬಂದಿದೆ.

ಕಣಿವೆ ರಾಜ್ಯಗಳಾದ ಕುಪ್ವಾರ, ಬಂಡಿಪೋರ, ಬಾರಾಮುಲ್ಲಾ, ಗಂದೇರ್ಬಾಲ್, ಕುಲ್ಗಾಂ, ಕಾರ್ಗಿಲ್ ಜಿಲ್ಲೆ ಸೇರಿದೆ ಕಾಶ್ಮೀರದ ಹಲವೆಗೆ ಮುಂದಿನ 24 ಗಂಟೆಯೊಳಗೆ ಭಾರೀ ಪ್ರಮಾಣದ ಹಿಮಪಾತವಾಗಲಿದ್ದು, ಅಪಾಯಕಾರಿ ಹಿಮ ಕುಸಿತವಾಗಲಿದೆ ಇಂದು ಬೆಳಿಗ್ಗೆಯಷ್ಟೇ ಹಿಮಪಾತ ಮತ್ತು ಹಿಮಕುಸಿತ ಅಧ್ಯಯನ ಸಂಸ್ಥೆ ಎಚ್ಚರಿಕೆ ನೀಡಿತ್ತು.

ಇದರಂತೆ ಕುಪ್ವಾರದಲ್ಲಿ ಭಾರೀ ಹಿಮಪಾತವೊಂದು ಸಂಭವಿಸಿದ್ದು, ಈ ವೇಳೆ ಕರ್ತವ್ಯನಿರತದಲ್ಲಿದ್ದ ಐವರು ಯೋಧರು ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ.ನಾಪತ್ತೆಯಾಗಿದ್ದ ಯೋಧರಿಗಾಗಿ ಅಧಿಕಾರಿಗಳು ತೀವ್ರ ಶೋಧನಾ ಕಾರ್ಯ ಆರಂಭಿಸಿದ್ದಾರೆ.

ಕಳೆದೊಂದು ವಾರದಿಂದ ಜಮ್ಮು ಮತ್ತು ಕಾಶ್ಮೀರದ ಹವಮಾನದಲ್ಲಿ ಭಾರಿ ಏರುಪೇರಾಗುತ್ತಿದ್ದು, ಭಾರಿ ಪ್ರಮಾಣದ ಹಿಮಪಾತವಾಗುತ್ತಿದೆ.ತಾಪಮಾನ ಕುಸಿತ ಹಾಗೂ ಹಿಮಪಾತಗಳಿಂದಾಗಿ ಗಡಿಯಲ್ಲಿ ಸೈನಿಕರು ಕರ್ತವ್ಯ  ನಿರ್ವಹಿಸುವುದೇ ದುಸ್ತರವಾಗಿ ಪರಿಣಮಿಸಿದೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತ ಸಂಭವಿಸಿದ ಪರಿಣಾಮ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 16 ಯೋಧರು ಹುತಾತ್ಮರಾಗಿದ್ದಾರೆ.

No Comments

Leave A Comment