Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಜಮ್ಮು: ಹಿಮಪಾತದಲ್ಲಿ ಸಿಲುಕಿದ್ದ ಕರ್ನಾಟಕದ ಸಂದೀಪ್ ಸೇರಿದಂತೆ 14 ಯೋಧರು ಹುತಾತ್ಮ

ಶ್ರೀನಗರ: ಜಮ್ಮು-ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗುರೆಜ್ ವಲಯದಲ್ಲಿ ಸೇನಾ ಶಿಬಿರದ ಮೇಲೆ ಹಿಮಕುಸಿತದಿಂದಾಗಿ ಹುತಾತ್ಮರಾದ ಯೋಧರ ಪೈಕಿ ಶಾಂತಿಗ್ರಾಮ ಹೋಬಳಿಯ ದೇವಿಹಳ್ಳಿಯ ವೀರ ಯೋಧ ಸಂದೀಪ್ ಶೆಟ್ಟಿ ಸೇರಿದ್ದಾರೆ. ಈ ಮೂಲಕ ಹುತಾತ್ಮ ಯೋಧರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.

ಸಂದೀಪ್ ಅವರಿಗೆ 2 ತಿಂಗಳ ಹಿಂದಷ್ಟೇ ಮದುವೆ ನಿಶ್ಚಿತಾರ್ಥವಾಗಿತ್ತು. ಮೊನ್ನೆ 25ರಂದು ಹಿಮಪಾತವಾಗುವುದಕ್ಕೆ ಕೆಲ ದಿನಗಳ ಹಿಂದೆ ಮನೆಯವರಿಗೆ ಕರೆ ಮಾಡಿ ಅಲ್ಲಿನ ದಟ್ಟ ಹಿಮ ಆವರಿಸಿದ ಬಗ್ಗೆ ತಿಳಿಸಿದ್ದರು. ಅವರ ಮದುವೆ ಫೆ.22 ರಂದು ನಡೆಯಬೇಕಿತ್ತು. ಇದೀಗ ಅವರ ವೀರ ಮರಣದಿಂದಾಗಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಅವರು 7-8 ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿದ್ದರು.

ಇನ್ನೊಬ್ಬ ಯೋಧ ಬೆಳಗಾವಿಯ ಶ್ರೀಹರಿ ಕೂಗಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಅಲ್ಲಿ ರಕ್ಷಣಾ ಕಾರ್ಯ ಅಂತ್ಯಗೊಂಡಿದೆ.

ನಿನ್ನೆ ಗುರೆಜ್ ವಲಯದ ಗಡಿ ನಿಯಂತ್ರಣ ರೇಖೆ ಬಳಿ 10 ಮಂದಿ ಸೈನಿಕರ ಮೃತದೇಹಗಳು ಸಿಕ್ಕಿ 4 ಮಂದಿ ಕಣ್ಮರೆಯಾಗಿದ್ದರು. ಇಂದು ಆ 4 ಮಂದಿ ಯೋಧರ ಶವ ಪತ್ತೆಯಾಗಿದೆ.

No Comments

Leave A Comment