Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಜ.29 ಮುಕ್ತ ವಾಹಿನಿಯ ಅದ್ದೂರಿ ಲೋಕಾರ್ಪಣೆ ಕಾರ್ಯಕ್ರಮ

ಕರಾವಳಿಯ ಮಾದ್ಯಮ ಲೋಕಕ್ಕೆ ನೂತನವಾಗಿ ಕಾಲಿಡುತ್ತಿರುವ ಮುಕ್ತ ವಾಹಿನಿಯ ಅದ್ದೂರಿ ಲೋಕಾರ್ಪಣೆ ಕಾರ್ಯಕ್ರಮ ಇದೇ ತಿಂಗಳ 29ನೇ ತಾರೀಕಿನಂದು ಮಲ್ಪೆ ಕಡಲಕಿನಾರೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು,ಉದ್ಯಮಿಗಳು, ಸಂತರು ಸೇರಿದಂತೆ ಎಪ್ಪತ್ತಕ್ಕೂ ಅಧಿಕ ಅತಿಥಿಗಳು ಭಾಗವಹಿಸಲಿದ್ದಾರೆ. ಸಂಜೆ 4.00 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ಉದ್ಘಾಟನೆಯ ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹದಿನಾಲ್ಕು ಸಾಧಕರನ್ನು ಗುರುತಿಸಿ ಗೌರವಿಸಲಿದ್ದೇವೆ.

ಸದ್ಯ ಮುಕ್ತ ಟಿವಿ ಪ್ರಾಯೋಗಿಕವಾಗಿ ಪ್ರಸಾರಗೊಳ್ಳುತ್ತಿದ್ದು, ಕಾರವಾರದಿಂದ ಕಾಸರಗೋಡುವರೆಗಿನ ಕರಾವಳಿ ಪ್ರದೇಶದಲ್ಲಿ ಪ್ರಸಾರಗೊಳ್ಳುತ್ತಿದೆ. ಸುದ್ದಿ ಮತ್ತು ಮನೋರಂಜನೆಗೆ ಸಮಾನ ಅವಕಾಶವನ್ನು ನೀಡುತ್ತಾ ಬಂದಿರುವ ಈ ವಾಹಿನಿಯ ಹಲವಾರು ನೂತನ ಕಾರ್ಯಕ್ರಮಗಳು ಉದ್ಘಾಟನೆಯ ಬಳಿಕ ಅಧಿಕೃತವಾಗಿ ಆರಂಭಗೊಳ್ಳಲಿವೆ.

ಮುಕ್ತ ತುಳು ಫಿಲ್ಮ್ ಅವಾರ್ಡ್

ಮುಕ್ತ ಟಿವಿ ಲೋಕಾರ್ಪಣೆಗೊಳ್ಳುತ್ತಿರುವ ಸಮಾರಂಭವನ್ನು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಮುಕ್ತ ತುಳು ಫಿಲ್ಮ್ ಅವಾರ್ಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿ 2016ರಲ್ಲಿ ಬಿಡುಗಡೆಯಾದ ಎಲ್ಲಾ ತುಳುಚಿತ್ರಗಳು ಭಾಗವಹಿಸುತ್ತಿವೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಸಂಯೋಜನೆ, ಹಿನ್ನೆಲೆ ಸಂಗೀತ, ಸಾಹಸ ಸಂಯೋಜನೆ, ನೃತ್ಯ ಸಂಯೋಜನೆ, ಉತ್ತಮ ಗಾಯಕ ,ಉತ್ತಮ ಗಾಯಕಿ, ಪೋಷಕ ನಟ,ನಟಿ,ಖಳ ನಟ, ಹಾಸ್ಯ ನಟ,ನಟಿ, ಸಂಕಲನ, ಛಾಯಾಗ್ರಹಣ, ಜನಮೆಚ್ಚಿದ ಹಾಸ್ಯ ನಟ,ಜನಮೆಚ್ಚಿದ ನಟ,ನಟಿ ತೀರ್ಪುಗಾರರ ಆಯ್ಕೆ, ಉತ್ತಮ ನಾಯಕನಟ,ನಾಯಕಿನಟಿ,ನಿರ್ದೇಶನ,ಮುಕ್ತ ತುಳುಫಿಲ್ಮ್ ಅವಾರ್ಡ್ ಮೊದಲಾದ ಬಹುಮಾನಗಳನ್ನು ನೀಡಲಿದ್ದೇವೆ.

ತುಳುಚಿತ್ರರಂಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಯೋಜಿಸಲಾಗಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ತುಳು ಚಿತ್ರರಂಗಕ್ಕಾಗಿ ದುಡಿದ ಬೋಜ ಸುವರ್ಣ,ಡಾ ಸಂಜೀವ ದಂಡಕೇರಿ, ವಿ.ಜಿ ಪಾಲ್ ಮತ್ತು ಟಿಎ ಶ್ರೀನಿವಾಸ್ ಅವರನ್ನು ಈ ಸಂದರ್ಬದಲ್ಲಿ ಗುರುತಿಸಿ ಗೌರವಿಸಲಾಗುವುದು. ಚಿತ್ರರಂಗದಲ್ಲಿ ದುಡಿದು ನಮ್ಮನ್ನು ಅಗಲಿರುವ ಸುಂದರನಾಥ್ ಸುವರ್ಣ ಮತ್ತು ಕೆ.ಎನ್. ಟೇಲರ್ ಅವರಿಗೆ ಮರಣೋತ್ತರವಾಗಿ ಜೀವಮಾನ ಸಾಧನೆ ಪ್ರಶಸ್ತಿ ಪ್ರಧಾನ ಮಾಡಲಿದ್ದೇವೆ.

ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಹದಿನೇಳು ಜನ ತಾರೆಯರು ತಾರಾ ಮೆರುಗು ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ವಾಹನ ನಿಲುಗಡೆ ವ್ಯವಸ್ಥೆಯನ್ನು ಗಾಂಧಿಶತಾಬ್ಧಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಭಾಗವಹಿಸಿ ತುಳು ಚಿತ್ರರಂಗ ಮತ್ತು ನೂತನವಾಗಿ ಪಾದಾರ್ಪಣೆ ಮಾಡುತ್ತಿರುವ ಮುಕ್ತ ಟಿವಿಯನ್ನು ಪ್ರೋತ್ಸಾಹಿಸಬೇಕು ಎಂದು ಸಂಸ್ಥೆಯ ಆಡಳಿತ ಮಂಡಳಿಯ ಪ್ರಮುಖರಾದ ವಿವೇಕ್ ಜಿ ಸುವರ್ಣ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾದ ಸರಸ್ವತಿ ಸಾಲ್ಯಾನ್, ಆಡಳಿತ ವ್ಯವಸ್ಥಾಪಕರಾದ ಅಶ್ವಥ್ ಕಾಂಚನ್ ಮೊದಲಾದವರು ಹಾಜರಿದ್ದರು.

No Comments

Leave A Comment