Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಉಡುಪಿ ನಗರಕ್ಕೆ 320 ಕೋ.ರೂ. ಅನುದಾನ

ಉಡುಪಿ: ಕುಡ್ಸೆಂಪ್‌ ಯೋಜನೆಯಡಿ ಕುಡಿಯುವ ನೀರಿನ ಯೋಜನೆಗೆ 101.20 ಕೋ.ರೂ., ಒಳಚರಂಡಿ ಯೋಜನೆಗೆ 185.90 ಕೋ.ರೂ., ಶೀಂಬ್ರ ಅಣೆಕಟ್ಟು ಯೋಜನೆಗೆ 33 ಕೋ.ರೂ. ಸಹಿತ ಒಟ್ಟು ನಗರಸಭಾ ವ್ಯಾಪ್ತಿಯಲ್ಲಿ 320 ಕೋ.ರೂ. ಯೋಜನೆ ಮಂಜೂರಾಗಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಅವರು ಬೀಡಿನಗುಡ್ಡೆಯ ಬಯಲು ರಂಗಮಂದಿರದಲ್ಲಿ ಗುರುವಾರ ಜಿಲ್ಲಾ ಮಟ್ಟದ 68ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣಗೈದು, ಸಂದೇಶ ನೀಡಿದರು.

ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಗೆ 63 ಕೋ. ರೂ. ವಿನಿಯೋಗಿಸಲಾಗಿದೆ. ಸ್ವ ಉದ್ಯೋಗ ಕಲ್ಪಿಸಲು ಅನುದಾನ, 529 ಫ‌ಲಾನುಭವಿಗಳಿಗೆ 699.62 ಎಕರೆ ಅರಣ್ಯ ಭೂಮಿ ಹಕ್ಕುಪತ್ರ ನೀಡಲಾಗಿದೆ. 18 ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ 4.91 ಕೋ.ರೂ. ಮಂಜೂರಾಗಿದೆ. ಕಾರ್ಕಳದಲ್ಲಿ ದೇವರಾಜು ಅರಸು ಭವನಕ್ಕೆ 1.22 ಕೋ.ರೂ. ಅನುದಾನ, 40 ಲ.ರೂ. ವೆಚ್ಚದಲ್ಲಿ ಬೀಡಿನಗುಡ್ಡೆಯಲ್ಲಿ ನಗರ ವಸತಿರಹಿತರಿಗೆ ಆಶ್ರಯತಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

46 ಕಿಂಡಿ ಆಣೆಕಟ್ಟು ಕಾಮಗಾರಿ
ತುರ್ತು ಕುಡಿಯುವ ನೀರಿನ ಯೋಜನೆಗೆ ಎಲ್ಲ ವಿಧಾನಸಬಾ ಕ್ಷೇತ್ರಗಳಿಗೆ ತಲಾ 40 ಲ.ರೂ. ಬಿಡುಗಡೆಯಾಗಿದೆ. 2016-17ನೇ ಸಾಲಿನಲ್ಲಿ 18.81 ಕೋ.ರೂ. ವೆಚ್ಚದಲ್ಲಿ 920 ಹೆಕ್ಟೇರ್‌ ಪ್ರದೇಶದಲ್ಲಿ 46 ಕಿಂಡಿ ಅಣೆಕಟ್ಟುಗಳ ಕಾಮಗಾರಿ ಕೈಗೊಳ್ಳುವ ತೀರ್ಮಾನ, 12 ನದಿದಂಡೆ ಹಾಗೂ 4 ಕೆರೆಗಳನ್ನು ಅಭಿಧಿವೃದ್ಧಿಧಿಪಡಿಸಲಾಗುತ್ತಿದ್ದು, ಇನ್ನೂ 9 ಕೆರೆಗಳ ಅಭಿವೃದ್ಧಿಪಡಿಸುವ ಯೋಜನೆಯಿದೆ. ಉಡುಪಿ ವ್ಯಾಪ್ತಿಯಲ್ಲಿ 137 ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 16.68 ಕೋ.ರೂ. ಅನುದಾನ ಬಿಡುಗಡೆಯಾಗಿದೆ ಎಂದರು.

ಮರವಂತೆಯಲ್ಲಿ ನಾಡದೋಣಿಗಳಿಗೆ ತಂಗುದಾಣ ನಿರ್ಮಾಣಕ್ಕೆ 45 ಕೋ.ರೂ., ಕಲ್ಮಾಡಿ ಬೊಬ್ಬರ್ಯಪಾದೆ, ಅಳಿವೆ ಗದ್ದೆಯಲ್ಲಿ ಜೆಟ್ಟಿ ನಿರ್ಮಾಣಕ್ಕೆ ತಲಾ 2 ಕೋ.ರೂ. ಮಂಜೂರಾಗಿದೆ. ಫೆಬ್ರವರಿಯಲ್ಲಿ ನಡೆಯುವ ರಾಜ್ಯಮಟ್ಟದ ಯುವಜನ ಮೇಳಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ತಾ. ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ಎಸ್‌ಪಿ ಕೆ.ಟಿ. ಬಾಲಕೃಷ್ಣ, ಜಿ.ಪಂ. ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು. ಶಿಕ್ಷಕ ಸತೀಶ್‌ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರ್ವಹಿಸಿದರು.

No Comments

Leave A Comment