Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಪ್ರಿಯಾಂಕಾಗಿಂತ ಸುಂದರಿಯರು ನಮ್ಮಲ್ಲಿಲ್ಲವೇ!:ಬಿಜೆಪಿ ನಾಯಕನ ವಿವಾದ

ಲಕ್ನೋ : ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ಕಾವು ಏರತೊಡಗಿದ್ದು, ರಾಜಕಾರಣಿಗಳ ಹೇಳಿಕೆಗಳು ಹೊಸ ವಿವಾದಗಳನ್ನು ಹುಟ್ಟು ಹಾಕುತ್ತಿವೆ. ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ವಿನಯ್‌ ಕಟಿಯಾರ್‌ ಅವರು ಪ್ರಿಯಾಂಕಾ ಗಾಂಧಿ ವಾದ್ರಾಗಿಂತ ನಮ್ಮ ಪಕ್ಷ ದಲ್ಲಿ ಸುಂದರಿಯರಿಲ್ಲವೇ ಎಂದು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆಯ ಸಂದರ್ಶಕ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ಪ್ರಚಾರ ನಡೆಸುವ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಕಟಿಯಾರ್‌ “ಏನಾಯ್ತು.. ಅವರಿಗಿಂತ ಸುಂದರಿಯರು ನಮ್ಮ ಪಕ್ಷದಲ್ಲಿಲ್ಲವೆ.. ಹಿರೋಹಿನ್‌ಗಳಿಲ್ಲವೆ.. ಸ್ಟಾರ್‌ ಕ್ಯಾಂಪೇನರ್‌ಗಳಿಲ್ಲವೆ..ಅವರೇನು ಅಂತಹಾ ಸುಂದರಿಯಲ್ಲ”ಎಂದು ವಿವಾದ ಹುಟ್ಟು ಹಾಕಿದರು.

62 ರ ಹರೆಯದ ಕಟಿಯಾರ್‌ ಅವರು ಬಜರಂಗದಳದ ಸಂಸ್ಥಾಪಕ ಅಧ್ಯಕ್ಷರಾಗಿದ್ದರು,ಉತ್ತರ ಪ್ರದೇಶದ ಬಿಜೆಪಿ ಘಟಕದ ರಾಜ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ವಿಶೇಷವೆಂದರೆ ಬಿಜೆಪಿ ಬಿಡುಗಡೆ ಮಾಡಿದ ಸ್ಟಾರ್‌ ಕ್ಯಾಂಪೇನರ್‌ಗಳ ಪಟ್ಟಿಯಲ್ಲಿ ಅವರ ಹೆಸರಿಲ್ಲ.

No Comments

Leave A Comment