Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಜ.28-30: ಉಡುಪಿಯಲ್ಲಿ ಜಿಲ್ಲಾ ಮಟ್ಟದ ಫ‌ಲ ಪುಷ್ಪ ಪ್ರದರ್ಶನ

ಉಡುಪಿ: ಹನ್ನೊಂದು ಪುಷ್ಪಜಾತಿ, ಹನ್ನೊಂದು ಸಾವಿರ ಗಿಡಗಳು, ಉಡುಪಿ ಜನರು ನೋಡದ ಕಾಕ್‌ಕೋಂಬ್‌, ಫೊಲೊಕ್ಸ್‌, ಪೆಟುನಿಯಾ, ಫ್ಯಾನ್ಸಿ, ಎಸ್ಟರ್‌ ಮುಂತಾದ ಅಪರೂಪದ ಪುಷ್ಪಗಳನ್ನು ಜ. 28 ರಿಂದ ಜ.30ರವರೆಗೆ ನೋಡುವ ಸದವಕಾಶವನ್ನು ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆಯ ಪುಷ್ಪ ಹರಾಜು ಕೇಂದ್ರದ ಆವರಣ, ದೊಡ್ಡಣ್ಣಗುಡ್ಡೆ, ಶಿವಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಕಲ್ಪಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಉಡುಪಿ ಜಿಲ್ಲೆ ಕೃಷಿ, ತೋಟಗಾರಿಕೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು, ಉಡುಪಿ ಜಿಲ್ಲೆ,ದ.ಕ.,ಉಡುಪಿ,ಚಿಕ್ಕಮಗಳೂರು ಪ್ರಾಂತೀಯ ಸಾವಯವ ಕೃಷಿಕರ ಒಕ್ಕೂಟ ಇವರ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ಫ‌ಲಪುಷ್ಪ ಪ್ರದರ್ಶನ, ಸಾವಯವ – ಸಿರಿಧಾನ್ಯ ಮೇಳ ಮತ್ತು ರೈತ ಸೇವಾ ಕೇಂದ್ರಗಳು ಜ. 28ರಂದು ಜರಗಲಿವೆ ಎಂದು ಜೆಡಿಒ ಚಂದ್ರಶೇಖರ್‌ ಹಾಗೂ ಇಲಾಖೆಯ ಕೃಷಿ ನಿರ್ದೇಶಕರಾದ ಭುವನೇಶ್ವರಿ ವಾರ್ತಾ ಇಲಾಖೆಯ ಉಪ ನಿರ್ದೇಶಕರಾದ ರೋಹಿಣಿ ಅವರ ಉಪಸ್ಥಿತಿಯಲ್ಲಿ ಜ. 24ರಂದು ಪತ್ರಕರ್ತರಿಗೆ ಮಾಹಿತಿ ನೀಡಿದರು.

2016-17 ನೇ ಸಾಲಿನ ಜಿಲ್ಲಾಮಟ್ಟದ  ತೋಟಗಾರಿಕೆ ಫ‌ಲಪುಷ್ಪ ಪ್ರದರ್ಶನ, ಸಾವಯವ -ಸಿರಿಧಾನ್ಯ ಮೇಳ ಮತ್ತು ರೈತ ಸೇವಾ ಕೇಂದ್ರಗಳ ಉದ್ಘಾಟನೆ – 2017ರ ಉದ್ಘಾಟನೆಯನ್ನು ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ  ಪ್ರಮೋದ್‌ ಮಧ್ವರಾಜ್‌ ಅವರಿಂದ ಉದ್ಘಾಟನೆಗೊಳ್ಳಲಿದೆ. ಜಿಲ್ಲಾ ಪಂಚಾಯತ್‌, ಅಧ್ಯಕ್ಷರಾದ  ದಿನಕರ ಬಾಬು, ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಈ ಫ‌ಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಮೇಳದಲ್ಲಿ ಶೇಷ ಆಕರ್ಷಣೆಗಳು ಈ ಕೆಳಗಿನಂತಿರುತ್ತದೆ. ನೇಗಿಲು, ನೊಗ ಪ್ರದರ್ಶನ. ನವಧಾನ್ಯದಿಂದ ಅಲಂಕರಿಸಲ್ಪಟ್ಟ ನಂದಿ, ಶಾವಿಗೆಯಲ್ಲಿ ನಿರ್ಮಾಣಗೊಳ್ಳುವ ತೋಟಗಾರಿಕಾ ಪಿತಾಮಹ ಡಾ| ಎಂ.ಎಚ್‌. ಮರಿಗೌಡರ ಮೂರ್ತಿ, ವಿವಿಧ ಪ್ರಾಣಿ ಹಾಗೂ ಕಲಾಕೃತಿಗಳ ತರಕಾರಿ ಕೆತ್ತನೆ, ತಾರಸಿ ತೋಟ-ಕೈ ತೋಟ ಪ್ರಮುಖ ಆಕರ್ಷಣೆಯಾಗಲಿವೆ.

9000 ಗುಲಾಬಿಯಲ್ಲಿ ಅರಳುವ ಕಾಪು ದೀಪ ಸ್ತಂಬ
ಒಂಬತ್ತು ಸಾವಿರ ಗುಲಾಬಿಯಲ್ಲಿ ಅರಳುವ ಕಾಪು ದೀಪ ಸ್ತಂಬ. 3 ಸಾವಿರ ಜರ್ಬೇರ ಹಾಗೂ ಗುಲಾಬಿಯಲ್ಲಿ ಕಂಗೊಳಿಸುವ ಯಕ್ಷಗಾನ ಕಿರೀಟ, ಒಂದು ಸಾವಿರ ಆರ್ಕಿಡ್‌ ಹಾಗೂ 800 ಆಲ್‌ ಸೋóàಮೆರಿಯಾ ಹೊವುಗಳಿಂದ ರಚಿತವಾಗುವ ಚೋಟಾ ಭೀಮ್‌ ಫ‌ಲ – ಪುಷ್ಪ  ಪ್ರೇಮಿಗಳನ್ನು ಆಕರ್ಷಿಸಲಿವೆೆ ಎಂದು ಅವರು ತಿಳಿಸಿದರು.

ಸಿರಿಧಾನ್ಯ ಮತ್ತು ಹಲವು ಜಾತಿ ಪುಷ್ಪಗಳನ್ನು ಖರೀದಿಸಲು ಪ್ರತ್ಯೇಕ 30 ಸ್ಟಾಲ್‌ಗ‌ಳನ್ನು ಆಯೋಜನೆಗೊಳಿಸಲಾಗಿದೆ. ಇಲಾಖೆಯ ಮಳಿಗೆಗಳಲ್ಲಿ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಹಾಗೂ ರೈತ ಸೇವಾ ಕೇಂದ್ರದ ಮಳಿಗೆಗಳಲ್ಲಿ  ವಿಚಾರಸಂಕಿರಣ, ಸಾವಯವ ವಸ್ತು ಪ್ರದರ್ಶನ, ಆಹಾರ ಮಳಿಗೆಗಳು, ಸಿರಿಧಾನ್ಯ ಪ್ರದರ್ಶನ,  ಮೀನು ಹಾಗೂ ಕೋಳಿ ಸಾಕಣೆಯ ಬಗ್ಗೆ ಮಾಹಿತಿಗಳೂ ಇಲ್ಲಿ  ಲಭ್ಯವಾಗಲಿವೆ ಎಂದು ಅವರು ಹೇಳಿದರು.

No Comments

Leave A Comment