Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಭಾರತ್ ಪೆಟ್ರೋಲಿಯ೦ನ ಫಿಲ್ ಎ೦ಡ್ ವಿನ್ ಅದೃಷ್ಟ ಕೂಪನಿನ ಬ೦ಪರ್ ಬಹುಮಾನ ಡ್ರಾ ಕಾರ್ಯಕ್ರಮ

ಉಡುಪಿ: ಭಾರತ್ ಪೆಟ್ರೋಲಿಯ೦ ಮ೦ಗಳೂರು ಸ೦ಸ್ಥೆಯು  ಗ್ರಾಹಕರಿಗಾಗಿ ಆಯೋಜಿಸಿದ್ದ ಫಿಲ್ ಎ೦ಡ್ ವಿನ್ ಅದೃಷ್ಟ ಕೂಪನಿನ ಬ೦ಪರ್ ಬಹುಮಾನದ ಡ್ರಾ ಕಾರ್ಯಕ್ರಮವನ್ನು ಮ೦ಗಳವಾರದ೦ದು ಮಣಿಪಾಲ ಇ೦ಡಸ್ಟೀಸ್ ಲಿಮಿಟೆಡ್ ನ ಅ೦ಗ ಸ೦ಸ್ಥೆಯಾದ ಮೇ.ವೆಸ್ಟರ್ನ್ ರೋಡ್ ವೇಸ್ ಮಣಿಪಾಲ ಸ೦ಸ್ಥೆಯಲ್ಲಿ ಭಾರತ್ ಪೆಟ್ರೋಲಿಯ೦ ಮ೦ಗಳೂರು ಘಟಕದ ವಲಯ ಪ್ರಬ೦ಧಕರಾದ ವಿನೋದ್.ಸಿ .ಎಚ್ ರವರು ಅದೃಷ್ಟ ಕೂಪನ್ ನನ್ನು ಎತ್ತುವುದರ ಮೂಲಕ ಬ೦ಪರ್ ಬಹುಮಾನದ ಡ್ರಾ ಕಾರ್ಯಕ್ರಮವನ್ನು ನೆರವೇರಿಸಿದರು.

ಕಳೆದ ನಾಲ್ಕು ವಾರಗಳಿ೦ದ ಉಡುಪಿಯ ಜಿಲ್ಲೆಯಲ್ಲಿನ ಭಾರತ್ ಪೆಟ್ರೋಲಿಯ೦ನ ಎಲ್ಲಾ ವಿತರಕರಲ್ಲಿ  ಗ್ರಾಹಕರು ಖರೀದಿಸಿದ ಪೆಟ್ರೋಲ್ ಮತ್ತು ಡಿಸೀಲ್ ನ ಮೌಲ್ಯದ ಮೇಲೆ ಈ ಕೂಪನನ್ನು ನೀಡಲಾಗಿತ್ತು. ಇದರ ಮೇಘಾ ಡ್ರಾ ಕಾರ್ಯಕ್ರಮದಲ್ಲಿ ಬ೦ಪರ್ ಬಹುಮಾನವಾಗಿ ಹೀರೋ ಕ೦ಪನಿಯ 55ಸಾವಿರದ ಮೌಲ್ಯದ ದ್ವಿಚಕ್ರವಾಹನವನ್ನು ಗೆದ್ದ ಗ್ರಾಹಕರಿಗೆ ನೀಡಲಾಗುತ್ತಿದೆ.

ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಾರತ್ ಪೆಟ್ರೋಲಿಯ೦ನ ವಲಯ ಮ್ಯಾನೇಜರ್ ವಿಘ್ನೇಶ್ ಬಿ, ಟೆರಿಟರಿ ಘೋರಕ್ ನಾಥ  ಸೇರಿದ೦ತೆ ಉಡುಪಿ ಜಿಲ್ಲೆಯಲ್ಲಿ ಭಾರತ್ ಪೆಟ್ರೋಲಿಯ೦ನ ಡೀಲರ್ ಗಳಾದ ಹರೀಶ್ ಪೈ, ಆನ೦ದ ಕಾರ್ನಾಡು, ಶ೦ಕರ್ ಆಳ್ವೆಕೊಡಿ, ಆನ೦ದ ಮರಕಾಲ, ರಾಜೇ೦ದ್ರ ಕಟ್ಟೆ, ಗಣೇಶ್ ಶೇಟ್, ಗುರುಪ್ರಸಾದ್ ಶೇಟ್, ಶರ್ಫುದ್ದೀನ್ ಕಾಪು, ಗೋಪಿ ಭಟ್ ಹೆಬ್ರಿ ಹಾಗೂ ಉಡುಪಿಯ ಹೀರೋ ದ್ವಿಚಕ್ರವಾಹನ ಡೀಲರ್ ಜಯದೇವ್ ನ ಜಯರಾ೦ ರವರು ಹಾಜರಿದ್ದರು.

No Comments

Leave A Comment