Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಅಣ್ಣಾಜಿ ಬಲ್ಲಾಳರು ಧರ್ಮದರ್ಶಿಗಳಿಗೆ ಆದರ್ಶಪ್ರಾಯರು:ಪುನರೂರು

ಉಡುಪಿ : ಅಂಬಲಪಾಡಿ ದೇವಳದ ಧರ್ಮದರ್ಶಿಗಳಾಗಿದ್ದ ಅಣ್ಣಾಜಿ ಬಲ್ಲಾಳರು ದೇವಳದ ಆಡಳಿತ ಚುಕ್ಕಾಣಿ ಹಿಡಿದ ಎಲ್ಲರಿಗೂ ಆದರ್ಶಪ್ರಾಯರಾಗಿದ್ದರು. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿಅದ ಡಾ. ನಿ.ಬೀ ವಿಜಯಬಲ್ಲಾಳರು ಸ್ತುತ್ಯರ್ಹವಾದ ಕೆಲಸ ಮಾಡಿದ್ದಾರೆ ಎಂಬುದಾಗಿ ಹರಿಕೃಷ್ಣ ಪುನರೂರು ರವರು ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಉಡುಪಿ ಯಕ್ಷಗಾನ ಕೇಂದ್ರಕ್ಕೆ ಪ್ರದಾನ ಮಾಡಿ ನುಡಿದರು.

ಪ್ರಶಸ್ತಿ ಸ್ವೀಕರಿಸಿದ ಯಕ್ಷಗಾನ ಕೇಂದ್ರದ ನಿರ್ದೇಶಕರಾದ ಹೆರಂಜೆ ಕೃಷ್ಣ ಭಟ್ಟರು ಮಾತನಾಡಿ 45ಕ್ಕೂ ಮಿಕ್ಕಿ ನಿರಂತರವಾಗಿ ಸಂಸ್ಥೆ ಕಲಾ ಸೇವೆ ಮಾಡುವಲ್ಲಿ ಡಾ. ಶಿವರಾಮ ಕಾರಂತ, ಹರಿದಾಸ ಭಟ್ ಹಾಗೂ ಎಲ್ಲಾ ಗುರುವೃಂದ ಮುಖ್ಯವಾಗಿ ಪ್ರಕೃತ ಪ್ರಾಂಶುಪಾಲರಾಗಿರುವ ಗುರು ಬನ್ನಂಜೆ ಸಂಜೀವ ಸುವರ್ಣರ ಕೃತುಶಕ್ತಿ ಕಾರಣವಾಗಿದೆ. ಅಣ್ಣಾಜಿ ಬಲ್ಲಾಳರು ಸಂಸ್ಥೆಗೆ ಸದಾ ಆರ್ಥಿಕ ಬೆಂಬಲ ನೀಡುತ್ತಾ ಪ್ರೋತ್ಸಾಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಹೆಸರಿನ ಪ್ರಶಸ್ತಿ ನಮಗೆ ಸಲ್ಲುತ್ತಿರುವುದು ಧನ್ಯತೆಯನ್ನುಂಟುಮಾಡಿದೆ ಎಂಬುದಾಗಿ ನುಡಿದರು.

ಆರಂಭದಲ್ಲಿ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ ವಿಜಯ ಬಲ್ಲಾಳ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅತಿಥಿಗಳಾಗಿ ಭುವನಪ್ರಸಾದ್ ಹೆಗ್ಡೆ ಮತ್ತು ಶ್ರೀಮತಿ ನಿರುಪಮಾ ಪಿ. ಶೆಟ್ಟಿ ಭಾಗವಹಿಸಿ ಮಂಡಳಿಯ ಚಟುವಟಿಕೆಗಳಿಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ ಹಿರಿಯ ಸದಸ್ಯ ಡಾ. ಪಿ.ಗಣಪತಿ ಭಟ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ನಿರ್ವಹಿಸಿದ ಸಮಾರಂಭದ ಕೊನೆಗೆ ಕೆ.ಜೆ ಗಣೇಶ್ ಧನ್ಯವಾದ ಸಮರ್ಪಿಸಿದರು.

No Comments

Leave A Comment