Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಯಕ್ಷಗಾನೋತ್ಸವಕ್ಕೆ ಅದ್ದೂರಿಯ ಚಾಲನೆ…

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ , ಬೆಂಗಳೂರು ಇವರು ಹಮ್ಮಿಕೊಂಡಿರುವ ಯಕ್ಷಗಾನೋತ್ಸವವನ್ನು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಉದ್ಘಾಟನೆ ಮಾಡಿ ತಮ್ಮ 1953ನೇ ಇಸವಿಯ ಪರ್ಯಾಯದಲ್ಲಿ ನಡೆದ ಮಾಧ್ವ ತತ್ವ ಸಮ್ಮೇಳನದಲ್ಲಿ ಯಕ್ಷಗಾನ ಬಯಲಾಟವನ್ನು ರಾಜಾಂಗಣದಲ್ಲಿ ಮಾಡಲು ಪ್ರೋತ್ಸಾಹ ಇಲ್ಲದ ಕಾರಣ ಮಧ್ವಮಂಟಪದಲ್ಲಿ ಪ್ರದರ್ಶಿಸ ಬೇಕಾಯಿತು. ಆದರೆ ಇಂದು ಯಕ್ಷಗಾನ ಕಲೆಗೆ ತುಂಬಾ ಪ್ರೋತ್ಸಾಹ ಸಿಗುತ್ತಿರುವುದರಿಂದ ಹೊಸ ಹೊಸ ಕಲಾವಿದರು ಸಿದ್ಧರಾಗಿ ಯಕ್ಷಗಾನವನ್ನು ವಿಶ್ವಾದ್ಯಂತ ಪ್ರದರ್ಶನ ನೀಡಲು ಅವಕಾಶ ಸಿಕ್ಕಿದೆ. ಹಲವಾರು ಯಕ್ಷಗಾನ ಮೇಳಗಳನ್ನು ಕಟ್ಟಿ ಬೆಳೆಸಿದ ಕಿಶನ್ ಹೆಗ್ಡೆಯವರು ಕಲಾವಿದರಿಗೆ ಪ್ರೋತ್ಸಾಹ ಹಾಗೂ ಅವಕಾಶವನ್ನು ನೀಡಿ ಕಲೆಯನ್ನು ಪೋಷಿಸುತ್ತಿದ್ದಾರೆ ಎಂದು ಅನುಗ್ರಹ ಸಂದೇಶ ನೀಡಿದರು.

ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಅಕಾಡಮಿಯ ವತಿಯಿಂದ ನಡೆಯುತ್ತಿರುವ ಯಕ್ಷಗಾನೊತ್ಸವದಂತಹ ಯಕ್ಷಗಾನ ಕಲಾ ಪ್ರಕಾರಗಳು ಆಯಾಯ ಜಿಲ್ಲೆಗಳಲ್ಲಿ ಮಾತ್ರ ಪ್ರದರ್ಶನ ಮಾಡದೇ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರದರ್ಶನವಾಗಲಿ ಎಂದರು.

ಈ ಸಭೆಯಲ್ಲಿ ಸ್ಥಳೀಯ ಸಂಚಾಲಕರಾದ ಪ್ರೊ.ಎಮ್.ಎಲ್.ಸಾಮಗ,ಸದಸ್ಯ ಸಂಚಾಲಕರಾದ ಪಿ.ಕಿಶನ್ ಹೆಗ್ಡೆ,ರಿಜಿಸ್ಟ್ರಾರ್ ಎಸ್.ಹೆಚ್.ಶಿವರುದ್ರಪ್ಪ ಉಪಸ್ಥಿತರಿದ್ದರು.

ನಾರಾಯಣ.ಎಂ.ಹೆಗ್ಡೆಯವರು ಕಾರ್ಯಕ್ರಮ ನಿರ್ವಹಿಸಿದರು.ಎಸ್.ಹೆಚ್.ಶಿವರುದ್ರಪ್ಪ ಸ್ವಾಗತಿಸಿದಕಾರ್ಯಕಮಕ್ಕೆ ನಾರಾಯಣ.ಎಂ.ಹೆಗ್ಡೆಯವರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ನೀಡಿದರು.

No Comments

Leave A Comment