Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಶೀನಾ ಬೋರಾ ಪ್ರಕರಣ: ಇಂದ್ರಾಣಿ, ಪೀಟರ್ ಮುಖರ್ಜಿ ವಿರುದ್ದ ಕೊಲೆ ಪ್ರಕರಣ ದಾಖಲು

ನವದೆಹಲಿ: ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಸಮೂಹ ಸಹಸಂಸ್ಥಾಪಕಿ ಇಂದ್ರಾಣಿ ಮುಖರ್ಜಿ, ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿ ಮೊದಲ ಪತಿ ಸಂಜೀವ್ ಖನ್ನಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಇಂದ್ರಾಣಿ ಮುಖರ್ಜಿ, ಪೀಟರ್ ಮುಖರ್ಜಿ ಹಾಗೂ ಸಂಜೀವ್ ಖನ್ನಾ ಮೂವರು ಆರೋಪಿಗಳ ವಿರುದ್ಧ ಮೂವರು ಸಿಬಿಐ ವಿಶೇಷ ನ್ಯಾಯಾಲಯ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದೆ.ಮೂವರು ಆರೋಪಿಗಳ ವಿರುದ್ದ ಅಪಹರಣ, ಕೊಲೆ ಹಾಗೂ ಸಾಕ್ಷ್ಯಾಧಾರ ನಾಶ ಮತ್ತು ತಪ್ಪು ಮಾಹಿತಿ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಅಲ್ಲದೆ, ನಕಲಿ ದಾಖಲೆಗಳನ್ನು ಅಸಲಿ ದಾಖಲೆಗಳೆಂದು ಹೇಳುತ್ತಿದ್ದ ಇಂದ್ರಾಣಿ ವಿರುದ್ದ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡಿದೆ. ಇದೇ ವೇಳೆ ಮೂವರ ವಿರುದ್ದ ಇದ್ದ ನಕಲು, ಮೋಸ ಮತ್ತು ಆರೋಪಿಗಳಿಗೆ ವಿಷ ಹಾಕಿದ್ದಾರೆಂಬ ಪ್ರಕರಣವನ್ನು ನ್ಯಾಯಾಲಯ ಕೈಬಿಟ್ಟಿದೆ.

ಕೆಲ ದಿನಗಳ ಹಿಂದಷ್ಟೇ ಪೀಟರ್ ಮುಖರ್ಜಿ ಪರವಾಗಿ ವಾದ ಮಂಡಿಸಿದ್ದ ಪರ ವಕೀಲ ಮಿಹಿರ್ ಘೀವಾಲ ಅವರು, ಸಿಬಿಐ ಅಧಿಕಾರಿಗಳು ಇಮೇಲ್ ಹಾಗೂ ಸಂದೇಶಗಳನ್ನು ಹಿಡಿದುಕೊಂಡು ಪ್ರಕರಣಕ್ಕೆ ಬಣ್ಣ ಹಚ್ಚುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸಂದೇಶಗಳನ್ನು ಇಟ್ಟುಕೊಂಡು ಪೀಟರ್ ಅವರು ಭಾಗಿಯಾಗಿದ್ದಾರೆಂದು ಹೇಳುತ್ತಿದ್ದಾರೆ. ಪೀಟರ್  ಅವರು ಕೊಲೆ ಹಾಗೂ ಮೋಸ, ನಕಲಿಯಲ್ಲಿ ಭಾಗಿಯಾಗಿದ್ದಾರೆಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ದೊರಕಿಲ್ಲ. ಸಾಕ್ಷ್ಯಾಧಾರಗಳು ದೊರಕದೆಯೇ ಪೀಟರ್ ಅವರ ವಿರುದ್ದ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

No Comments

Leave A Comment