Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಬೆಂಗಳೂರು:ಗೋಡೆ ಕುಸಿತ:ಮಂತ್ರಿ ಮಾಲ್ ಆಡಳಿತ ಮಂಡಳಿ ವಿರುದ್ಧ FIR ದಾಖಲು!

ಬೆಂಗಳೂರು(ಜ.17): ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧ ಮಂತ್ರಿ ಮಾಲ್’ನ ಹಿಂಬಾಗದ ಗೋಡೆ ಕುಸಿತಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 304ರ ಅಡಿ FIR ದಾಖಲಿಸಲಾಗಿದೆ.

ಮಂತ್ರಿ ಮಾಲ್’ನ ಆಡಳಿತ ಮಂಡಳಿ ವಿರುದ್ಧ ಇಲ್ಲಿನ ಪೊಲೀಸರು FIR ದಾಖಲಿಸಿದ್ದಾರೆ. ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ಈ FIR ನಲ್ಲಿ ಉಲ್ಲೇಖಿಸಲಾಗಿದೆ. ನಿನ್ನೆ ನಡೆದ ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಮರೀನ್ ಹಾಗೂ ಲಕ್ಷ್ಮಿ ಎಂಬುವವರು ನೀಡಿದ ಹೇಳಿಕೆಯ ಆಧಾರದ ಮೇಲೆ ಈ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಮಂತ್ರಿ ಮಾಲ್’ನ ಮತ್ತೊಂದು ಗೋಡೆ ಕುಸಿತ…

ಮಂತ್ರಿ ಮಾಲ್ ಹಿಂಭಾಗದ ಮತ್ತೊಂದು ಗೋಡೆ ಕಳೆದ ರಾತ್ರಿ ಈ ಗೋಡೆ ಕುಸಿದು ಬಿದ್ದಿದೆ. ಮಾಲ್’ನ ಹಿಂಬದಿ ಗೋಡೆ ಸಂಪೂರ್ಣ ಬಿರುಕು ಬಿಟ್ಟಿತ್ತು, ಇದರಿಂದಾಗಿ ಮತ್ತೊಂದು ಗೋಡೆ ಬಿದ್ದಿದೆ. ಆದರೆ ಈ ಕುರಿತ ಮಾಹಿತಿಯನ್ನು ಅಧಿಕಾರಿಗಳು ಗೌಪ್ಯವಾಗಿಟ್ಟಿದ್ದಾರೆ.

ಗೋಡೆ ಕುಸಿಯುತ್ತಿರುವ ಕಾರಣದಿಂದ ಸಿಬ್ಬಂದಿಗಳು ಮಾಲ್ ಒಳಗೆ ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದಾರೆ. ನಿನ್ನೆ ಮಧ್ಯಾಹ್ನ ಮಾಲ್’ನ ಹಿಂಬದಿ ಗೋಡೆ ಕುಸಿದು ಬಿದ್ದಿತ್ತು. ಅಲ್ಲದೇ ಈ ಘಟನೆಯ ಬಳಿಕ ಮಾಲ್’ನ ಗೋಡೆಗಳಲ್ಲಿ ಬಿರುಕು ಕಂಡು ಬಂದಿತ್ತು. ತಡರಾತ್ರಿ ಬಿರುಕು ಬಿಟ್ಟ ಗೋಡೆಗಳು ಕುಸಿದಿರುವ ಮಾಹಿತಿ ತಿಳಿದು ಬಂದಿದೆ. ಈ ಕುರಿತಾಗಿ ಅಧಿಕಾರಿಗಳ ಬಳಿ ಕೇಳಿದಾಗ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರೆ.

ಮುಂಜಾಗೃತಾ ಕ್ರಮವಾಗಿ ನಿನ್ನೆಯಿಂದಲೇ ಸಾರ್ವಜನಿಕರಿಗೆ ಮಂತ್ರಿ ಮಾಲ್ ಪ್ರವೇಶಕ್ಕೆ ನಿರ್ಭಂದ ಹೇರಲಾಗಿತ್ತು.

No Comments

Leave A Comment