Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಚಕ್ರವರ್ತಿ ಒಬ್ಬ ಸ್ಟಾರ್ ಚಿತ್ರವಲ್ಲ, ಒಂಬತ್ತು ಹೀರೋಗಳ ಚಿತ್ರ: ದರ್ಶನ್

ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಚಿತ್ರದ ಕುರಿತಂತೆ ಮಾತನಾಡಿರುವ ದರ್ಶನ್ ಅವರು ಚಿತ್ರದಲ್ಲಿ ಸ್ಟಾರ್ ಗಳಿಲ್ಲ ಬರೀ ನಟರಿದ್ದಾರೆ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ಒಬ್ಬ ಸ್ಟಾರ್ ಅಲ್ಲ. ಒಂಬತ್ತು ಹೀರೋಗಳಿದ್ದಾರೆ. ನಾನು ಸೇರಿದಂತೆ ಆದಿತ್ಯ, ಸೃಜನ್ ಲೋಕೇಶ್, ಯಶಸ್, ಸರ್ದಾರ್ ಸತ್ಯ, ಕುಮಾರ್ ಬಂಗಾರಪ್ಪ, ಮನೋಜ್, ಭರತ್ ಮತ್ತು ಸಿದ್ಧಾರ್ಥ್ ನಟಿಸಿದ್ದು ಅವರೆಲ್ಲಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದರು.

ಚಿತ್ರದ ನಿರ್ದೇಶಕ ದಿನಕರ್ ತೂಗುದೀಪ್ ಸಹ ಒಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜತೆಗೆ ಶಾವರ್ ಅಲಿ, ಶಿವಧ್ವಜ್ ಹರೀಶ್ ರಾಯ್ ಮತ್ತು ಶರತ್ ಲೋಹಿತಾಶ್ವ ಅವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.

ಚಿತ್ರದ ಛಾಯಾಗ್ರಾಹಕ ಕೆಎಸ್ ಚಂದ್ರಶೇಖರ್ ಅವರು ಸನ್ನಿವೇಶಗಳನ್ನು ಸುಂದರವಾಗಿ ಸೆರೆಯಿಡಿದಿದ್ದಾರೆ. ಇನ್ನು ಅರ್ಜುನ್ ಜನ್ಯ ಉತ್ತಮ ಸಂಗೀತ ನೀಡಿದ್ದಾರೆ ಎಂದರು.

ಇನ್ನು ಚಿತ್ರದ ನಿರ್ಮಾಪಕರನ್ನು ಹೊಗಳಿರುವ ದರ್ಶನ್, ನಿರ್ಮಾಪಕ ಸಿದ್ಧಾರ್ಥ್ ನೀವು ನನ್ನ ಅಣ್ಣನಂತೆ ಎಂದು ಹೇಳುತ್ತಾರೆ. ಆದರೆ ನಿಜ ಹೇಳಬೇಕೆಂದರೆ ನನಗೆ ಒಳ್ಳೆಯ ಸಹೋದರ ಸಿಕ್ಕಿದ್ದಾನೆ ಎಂದು ಹೇಳಿದರು.

No Comments

Leave A Comment