Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಹರಿಕಥಾ ಪಂಚಾಹ ಕಾರ್ಯಕ್ರಮಕ್ಕೆ ಚಾಲನೆ

ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ಹಂಡೆ ದಾಸ ಪ್ರತಿಷ್ಠಾನ(ರಿ)ಕಾರ್ಕಳ,ಇವರು ಸಂಯೋಜಿಸಿರುವ ಹರಿಕಥಾ ಪಂಚಾಹ ಕಾರ್ಯಕ್ರಮವನ್ನು ಪರ್ಯಾಯ ಶ್ರೀ ವಿಶ್ವೇಶ ಶ್ರೀಪಾದರು ಉದ್ಘಾಟನೆ ಮಾಡಿದರು.

ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ  ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ  ಧರ್ಮದರ್ಶಿಗಳಾದ ಡಾ.ನಿ.ಬಿ.ವಿಜಯ ಬಲ್ಲಾಳರು  ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಡುಪಿ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಎಸ್.ಎ. ಕೃಷ್ಣಯ್ಯ ಹಾಗೂ ಹಂಡೆ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿ ಹಂಡೆ ಇವರು ಉಪಸ್ಥಿತರಿದ್ದರು.

ನಂತರ ಶ್ರೀಮತಿ ರುಕ್ಮಿಣಿ ಹಂಡೆ ಯವರ ಶಿಷ್ಯ ಉಡುಪಿ ಪ್ರಹ್ಲಾದ ಗುರುಕುಲದ ವಿದ್ಯಾರ್ಥಿಯಾದ ಕುಮಾರ ಶ್ರೀನಿವಾಸನಿಂದ  “ಭಕ್ತ ಮಾರ್ಕಂಡೇಯ ” ಕಥಾ ಭಾಗದ ಹರಿಕಥೆ ನಡೆಯಿತು.

No Comments

Leave A Comment