Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

ಜ.17ಉಡುಪಿಯಲ್ಲಿ ರೋಹಿತ್ ವೇಮುಲಾ ಸಾವಿಗೆ ನ್ಯಾಯಕ್ಕೆ ಆಗ್ರಹಿಸಿ ಮೇಣದ ಬೆಳಕಿನ ಪ್ರತಿಭಟನೆ

ಉಡುಪಿ : ಹೈದರಬಾದಿನ ಕೇಂದ್ರಿಯ ವಿ.ವಿ.ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಸಾವು ಕಳೆದ 2016 ರ ಜನವರಿ,17 ರಂದು ಸಂಭವಿಸಿತ್ತು. ಯುನಿವರ್ಸಿಟಿಯ ದಬ್ಬಾಳಿಕೆಯಿಂದ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದ. ಇದರ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ, ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಮತ್ತು ವಿ.ವಿ.ಯ ಕುಲಪತಿ ಅಪ್ಪಾರಾವ್ ಮತ್ತಿತರರು ಆರೋಪಿಗಳೆಂದು, ಅವರ ವಿರುದ್ಧ ತನಿಖೆ ನಡೆಯಬೇಕೆಂದು ಆಪಾದಿಸಿ, ಹಕ್ಕೊತ್ತಾಯ ಮಾಡಲಾಗಿತ್ತು.

ಆದರೇ, ತನಿಖೆ ಸರಿಯಾದ ರೀತಿಯಲ್ಲಿ ನಡೆಯದೇ, ರೋಹಿತ್ ವೇಮುಲಾ ದಲಿತನಲ್ಲ ಎಂಬ ವಿಚಾರವೇ ಪ್ರಾಮುಖ್ಯತೆ ಪಡೆಯುತ್ತಿದ್ದು, ನೈಜ್ಯ ಕಾರಣಗಳನ್ನು ಮರೆ ಮಾಚಲಾಗುತ್ತಿದೆ. ಇದರ ವಿರುದ್ಧ ಹೈದರಬಾದಿನ ಕೇಂದ್ರೀಯ ವಿ.ವಿ.ಯಲ್ಲಿ ಈ ಬಾರಿ ದೊಡ್ಡ ಮಟ್ಟದ ಹೋರಾಟವನ್ನು ರೋಹಿತ್ ವೇಮುಲಾ ಸ್ತೂಪದ ಬಳಿ ನಡೆಸುತ್ತಿದ್ದು, ಇದಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಉಡುಪಿಯ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯಿಂದ ಉಡುಪಿಯ ಕ್ಲಾಕ್ ಟವರ್ ಬಳಿ, ನಾಳೆ (ಜನವರಿ,17,2017, ಮಂಗಳವಾರ) ಸಂಜೆ 6.15 ರಿಂದ ಮೇಣದ ಬತ್ತಿಯನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಲಾಗುವುದು.

ಈ ಮಹತ್ವದ ಜೀವ ಪರ ಕಾರ್ಯಕ್ರಮದಲ್ಲಿ ರೋಹಿತ್ ವೇಮುಲಾ ಸಾವಿನ ನ್ಯಾಯಕ್ಕಾಗಿ ದಲಿತ-ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಸಂಘಟನೆಗಳವರು ಕೈ ಜೋಡಿಸಬೇಕು ಮತ್ತು ನ್ಯಾಯದ ಪರವಾಗಿರುವ ಹೋರಾಟದಲ್ಲಿ ಜೊತೆಯಾಗಬೇಕೆಂದು ಪ್ರಕಟಣೆ ತಿಳಿಸಿದೆ

No Comments

Leave A Comment