Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಉಡುಪಿಯ ಕೋಟ ತಟ್ಟು ಗ್ರಾಮ ಪಂಚಾಯಿತಿ ಸಂಪೂರ್ಣ ಕ್ಯಾಶ್ ಲೆಸ್!

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕ್ಯಾಶ್ ಲೆಸ್ ಕನಸು ಉಡುಪಿಯ ಕೋಟ ತಟ್ಟು ಗ್ರಾಮ ಪಂಚಾಯಿತಿಯಲ್ಲಿ ಸಂಪೂರ್ಣ ನನಸಾಗಿದೆ.

ಕೋಟ ತಟ್ಟು ಗ್ರಾಮಪಂಚಾಯಿತಿ ಜ.16 ರಿಂದ ನಗದು ರಹಿತ ವಹಿವಾಟು ನಡೆಸಲಿದ್ದು, ನೀರಿನ ತೆರಿಗೆ, ಮನೆ ತೆರಿಗೆ, ಕಟ್ಟ ನಿರ್ಮಾಣ ಪರವಾನಗಿ, ವ್ಯಾಪಾರ ಪರವಾನಗಿ ಮುಂತಾದ ಶುಲ್ಕಗಳನ್ನು  ಸ್ವೈಪಿಂಗ್‌ ಮಿಷಿನ್‌, ಆನ್ ಲೈನ್ ನಲ್ಲೇ ಪಡೆಯುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

ಕೋಟಾ ತಟ್ಟು ಗ್ರಾಮದಲ್ಲಿ ಒಟ್ಟು 1,032 ಕುಟುಂಬಳಿದ್ದು, ಈ ಪೈಕಿ ಡೆಬಿಟ್ ಕಾರ್ಡ್ ಹೊಂದದ 200 ಕುಟುಂಬಗಳಿದ್ದರೆ, 20 ಕುಟುಂಬಗಳಿಗೆ ಬ್ಯಾಂಕ್ ಖಾತೆಗಳಿರಲಿಲ್ಲ, ಆದರೆ ಗ್ರಾಮ ಪಂಚಾಯಿತಿ ಸದಸ್ಯರು ಬ್ಯಾಂ ಖಾತೆಗಳಿಲ್ಲದ, ಡೆಬಿಟ್ ಕಾರ್ಡ್ ನ್ನು ಹೊಂದಿರದ ಕುಟುಂಬಗಳಿಗೆ ನಗದು ರಹಿತ ವಹಿವಾಟುಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್ ಗಳಿಲ್ಲದ ಮನೆಗಳಿಗೆ ಭೇಟಿ ನೀಡಿ ಬ್ಯಾಂಕ್ ಖಾತೆಗಳನ್ನು ಮಾಡಿಸಿ, ಡೆಬಿಟ್ ಕಾರ್ಡ್ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.

ಪಂಚಾಯಿತಿಗೆ ವಾರ್ಷಿಕವಾಗಿ 20 ಲಕ್ಷ ಆದಾಯವಿದ್ದು, ಇನ್ನು ಮುಂದೆ ನಗದು ರೂಪದಲ್ಲಿ ಯಾವುದೇ ತೆರಿಗೆಯನ್ನು ಸ್ವೀಕರಿಸದೇ ಇರಲು ನಿರ್ಧರಿಸಿದ್ದೇವೆ ಎಂದು ಕೋಟಾ ತಟ್ಟು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಮೀರಾ ತಿಳಿಸಿದ್ದಾರೆ.

No Comments

Leave A Comment