Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಜಮ್ಮುವಿನಲ್ಲಿ ಎನ್ ಕೌಂಟರ್: ಮೂವರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ

ಜಮ್ಮು: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಮ್ ಪಟ್ಟಣದಲ್ಲಿ ಅಡಗಿ ಕುಳಿತಿದ್ದ ಮೂವರು ಉಗ್ರಗಾಮಿಗಳನ್ನು ಭದ್ರತಾ ಪಡೆ ಯೋಧರು ಸೋಮವಾರ ಮುಂಜಾನೆ ಹತ್ಯೆ ಮಾಡಿದ್ದಾರೆ.

ಉಗ್ರಗಾಮಿಗಳು ಹಿಜ್ ಬುಲ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯರೆಂದು ನಂಬಲಾಗಿದ್ದು ಸ್ಥಳೀಯ ನಿವಾಸಿಗಳೆಂದು ಹೇಳಲಾಗಿದೆ.ಸ್ಥಳದಿಂದ ಮೂರು ಎಕೆ-47 ರೈಫಲ್ ಮತ್ತು ಅಪಾರ ಪ್ರಮಾಣದ ಆಯುಧ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದಕ್ಕೂ ಮುನ್ನ  ನಿನ್ನೆ ನಡೆದ ವಿದ್ಯಮಾನದಲ್ಲಿ ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಿನ್ನೆ ನಡೆದ ಭೀಕತ ಗುಂಡಿನ ಚಕಮಕಿಯಲ್ಲಿ ಹಿಜ್ ಬುಲ್ ಸಂಘಟನೆಯ ಜಿಲ್ಲಾ ಕಮಾಂಡರ್ ಮತ್ತು ಆತನ ಸಹಚರರನ್ನು ಭದ್ರತಾ ಪಡೆ ಯೋಧರು ಕೂಡಿ ಹಾಕಿದ್ದರು.

ನಿನ್ನೆ ಉಗ್ರಗಾಮಿಗಳು ಭದ್ರತಾ ಪಡೆಗಳತ್ತ ಗುಂಡಿನ ದಾಳಿ  ಆರಂಭಿಸಿದ್ದರು. ತಕ್ಷಣ ಕಾರ್ಯಪ್ರವೃತ್ತವಾದ ಯೋಧರು ಪಹಲ್ಗಾಮ್ ಪಟ್ಟಣದ ಅವೂರಾ ಗ್ರಾಮವನ್ನು  ಸುತ್ತುವರೆದರು. ಅಲ್ಲಿ ಉಗ್ರಗಾಮಿಗಳು ಅವಿತು ಕುಳಿತಿರುವ ಮಾಹಿತಿ ಅವರಿಗೆ ಲಭ್ಯವಾಗಿತ್ತು.

ಭದ್ರತಾ ಪಡೆಗಳ ಕಾರ್ಯಾಚರಣೆ ವಿಷಯ ತಿಳಿದ ಉಗ್ರಗಾಮಿಗಳು ಅವಿತಿದ್ದಲ್ಲಿಂದ ಗುಂಡು ಹಾರಿಸಿದರು.

ಮೂವರು ಉಗ್ರಗಾಮಿಗಳ ಇರುವಿಕೆಯ ಮಾಹಿತಿ ಪಡೆದ ಸೇನೆಯ ಮೂರನೇ ರಾಷ್ಟ್ರೀಯ ರೈಫಲ್ಸ್ ಮತ್ತು ವಿಶೇಷ ಕಾರ್ಯಾಚರಣೆ ಗುಂಪಿನ ಪೊಲೀಸರು ಅವೂರಾ ಪಟ್ಟಣದ ಗುಜರ್ಬಸ್ತಿ ಪ್ರದೇಶವನ್ನು ಸುತ್ತುವರೆದರು. ಇದು ನಡೆದದ್ದು ನಿನ್ನೆ ಸಂಜೆ 4.30ರ ವೇಳೆಗೆ. ಶಂಕಿತ ಭಯೋತ್ಪಾದಕರನ್ನು ಹಿಡಿಯಲು ನಂತರ ಸೇನಾ ಶೋಧ ಕಾರ್ಯಾಚರಣೆ ಆರಂಭವಾಯಿತು.

ಶೋಧ ಕಾರ್ಯಾಚರಣೆ ಮುಂದುವರಿಯುತ್ತಿದ್ದಂತೆ ಅಡಗಿ ಕುಳಿತಿದ್ದ ಭಯೋತ್ಪಾದಕರು ಯೋಧರ ಕಡೆ ಗುಂಡಿನ ದಾಳಿ ಮಾಡಲಾರಂಭಿಸಿದರು. ಅದಕ್ಕೆ ಪ್ರತ್ಯುತ್ತರ ನೀಡಿದಾಗ ಎನ್ ಕೌಂಟರ್ ಆರಂಭವಾಯಿತು.ಅಲ್ಲಿಗೆ ಹೆಚ್ಚಿನ ಪಾರಾ ಕಮಾಂಡ್ ಗಳು ಆಗಮಿಸಿ ಉಗ್ರರು ತಪ್ಪಿಸಿಕೊಂಡು ಹೋಗುವುದನ್ನು ತಡೆದರು.

No Comments

Leave A Comment