Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಗಾಳಿಪಟ ಉತ್ಸವದ ವೇಳೆ ದೋಣಿ ಮಗುಚಿ 29 ಮಂದಿ ಸಾವು, 20 ಮಂದಿ ನಾಪತ್ತೆ/Patna boat tragedy: Death toll rises to 24, PM announces ex-gratia for victims

ಪಾಟ್ನಾ : ಮಕರ ಸಂಕ್ರಾಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಗಾಳಿಪಟ ಉತ್ಸವದ ವೇಳೆ ದೋಣಿ ಮಗುಚಿ ಬಿದ್ದು 29 ಮಂದಿ ಸಾವನ್ನಪ್ಪಿ, 20 ಜನ ನಾಪತ್ತೆಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಪಾಟ್ನಾದ ಗಂಗಾನದಿಯಲ್ಲಿ ಈ ದುರಂತ ಸಂಭವಿಸಿದೆ.ದೋಣಿಯಲ್ಲಿ 80 ಜನ ಇದ್ದರೆಂದು ಹೇಳಲಾಗಿದೆ. ಅದರಲ್ಲೆ 29 ಜನ ಸಾವನ್ನಪ್ಪಿ. 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.ರಾಜ್ಯ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಗಾಳಿ ಪಟ ಸ್ಪರ್ದೆಯಲ್ಲಿ ಜನಜಂಗುಳಿ ಹೆಚ್ಚಿದ ಪರಿಣಾಮ ಈ ದುಂರತ ಸಂಭವಿಸಿದೆ.

ಉತ್ಸವದಲ್ಲಿ ಭಾಗವಹಿಸಲು ಹೆಚ್ಚಿನ ಜನ ಆಗಮಿಸಿದ್ದರು. ಆದರೆ ಅವರಿಗೆ ಅಗತ್ಯ ವಾದಷ್ಟು ಸಂಖ್ಯೆಯಲ್ಲಿ ದೋಣಿಗಳು ಇರಲಿಲ್ಲ, ದೋಣಿಯಲ್ಲಿ ಮಿತಿಗಿಂತ ಹೆಚ್ಚಿನ ಜನರನ್ನು ತುಂಬಿದ್ದು ದುರಂತಕ್ಕೆ ಕಾರಣ ಎಂದು ಕೆಲ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ತಡರಾತ್ರಿಯವರೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿತ್ತು.

ರಕ್ಷಣಾ ತಂಡ 8 ಜನರನ್ನು ಪಾರು ಮಾಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಣೆಯಾದವರಿಗಾಗಿ ಹುಡುಕಾಟ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತಾಪ ಸೂಚಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ತನಿಖೆಗೆ ಆದೇಶಿಸಿದ್ದಾರೆ.

ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ಧನ ನೀಡುವಂತೆ ನಿತೀಶ್ ಕುಮಾರ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಉತ್ತರಪ್ರದೇಶದ ನಿಯಮದ ಪ್ರಕಾರ ದುರಂತದಲ್ಲಿ ಮೃತಪಟ್ಟರೆ ಅಂಥವರ ಕುಟುಂಬಕ್ಕೆ ನಾಲ್ಕು ಲಕ್ಷ ರೂ. ಪರಿಹಾರ ದೊರೆಯಲಿದೆ.

ದುರಂತ ನಡೆದು 45 ನಿಮಿಷಗಳ ನಂತರ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿತು. ಇದರಿಂದಾಗಿ ಸಾವಿನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ, ದೋಣಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ದುರಂತ ಸಂಭವಿಸಿದೆ ಎಂದು ಕೆಲ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

At least 29 people were killed, including some minors, when a boat capsized on the Ganga here on Saturday, with several people still missing as the rescue operation was halted late at night.

Efforts are on to look for possible survivors and bodies. Amrit, DIG Shalin and Patna District Magistrate Sanjay Kumar Aggarwal are camping at the river bank, close to which the tragedy occurred, to supervise the rescue operation.

However, the rescue operation was halted late at night and resumed early morning today.

Here are the live updates:

* Death toll rises to 24; search and rescue operations underway.

* PM announces ex-gratia from PMNRF of Rs 2 lakh for next of kin of those deceased & Rs.50,000 for those seriously injured

Patna District Magistrate Sanjay Kumar Aggarwal told reporters said prima facie it appears that the boat capsized either due to overloading or collision with another country boat, mid-water.

Around 40 people were said to be onboard the country boat when it capsized near NIT ghat in the evening. Only eight people have been rescued.

No Comments

Leave A Comment