Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಎಕ್ಸಾಂ ಹಾಲ್’ಟಿಕೆಟ್ ನಲ್ಲಿ ನಟಿಯ ಟಾಪ್’ಲೆಸ್ ಫೋಟೋ: ಶಾಕ್ ಆದ ವಿದ್ಯಾರ್ಥಿನಿ!

ಪಾಟ್ನಾ: ಸ್ಪರ್ಧಾತ್ಮಕ ಪರೀಕ್ಷೆಯೊಂದರಲ್ಲಿ ವಿದ್ಯಾರ್ಥಿನಿ ಭಾವಚಿತ್ರದ ಬದಲಿಗೆ ಪ್ರಸಿದ್ಧ ನಟಿಯೊಬ್ಬಳ ಟಾಪ್ ಲೆಸ್ ಫೋಟೋ ಹಾಕುವ ಮೂಲಕ ಬಿಹಾರ ಸಿಬ್ಬಂದಿ ನೇಮಕಾತಿ ಆಯೋಗ ಮತ್ತೆ ವಿವಾದವೊಂದನ್ನು ತನ್ನ ಮೇಲೆ ಎಳೆದುಕೊಂಡಿದೆ.

ಫೆಬ್ರವರಿ 26 ರಿಂದ ಎಸ್ಎಸ್’ಸಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಬಿಹಾರ ಸಿಬ್ಬಂದಿ ನೇಮಕಾತಿ ಆಯೋಗ ಜನವರಿ 8 ರಂದು ಪರೀಕ್ಷಾ ಪ್ರವೇಶ ಪತ್ರವನ್ನು ವಿದ್ಯಾರ್ಥಿಗಳಿಗೆ ನೀಡಿತ್ತು.ಇದರಂತೆ ಪ್ರವೇಶ ಪತ್ರವನ್ನು ಪಡೆದಿದ್ದ ವಿದ್ಯಾರ್ಥಿಯೊಬ್ಬಳಿಗೆ ಆಘಾತವಾಗಿತ್ತು, ಹಾಲ್ ಟಿಕೆಟ್ ನಲ್ಲಿ ತನ್ನ ಭಾವಚಿತ್ರದ ಬದಲಿಗೆ ನಟಿಯೊಬ್ಬಳ ಟಾಪ್ ಲೆಸ್ ಫೋಟೋ ಕಂಡು ಬಂದಿತ್ತು.ನಳಂದ ಜಿಲ್ಲೆಯ ನಿವಾಸಿಯಾಗಿರುವ ವಿದ್ಯಾರ್ಥಿಯೊಬ್ಬಳಿಗೆ ನೀಡಿದ್ದ ಹಾಲ್ ಟಿಕೆಟ್ ನಲ್ಲಿ ನಟಿಯೊಬ್ಬಳ ಟಾಪ್ ಲೆಸ್ ಫೋಟೋ ಕಂಡುಬಂದಿದೆ.

ಜನವರಿ 8 ರಂದು ನೀಡಿದ್ದ ಈ ಪ್ರವೇಶ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಹಾರ ಸಿಬ್ಬಂದಿ ನೇಮಕಾತಿ ಆಯೋಗದ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿವೆ.ಕಳೆದ ವರ್ಷ ಕೂಡ ಇಂತಹದ್ದೇ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಹಾರ ಪರೀಕ್ಷಾ ಮಂಡಳಿ ವಿವಾದವೊಂದಕ್ಕೆ ಸಿಲುಕಿಕೊಂಡಿತ್ತು. ರಾಜ್ಯಶಾಸ್ತ್ರ ವಿಷಯದಲ್ಲಿ ಟಾಪರ್ ಆಗಿದ್ದ ವಿದ್ಯಾರ್ಥಿಯೊಬ್ಬರು ಸಾಮಾನ್ಯ ಪ್ರಶ್ನೆಯೊಂದಕ್ಕೆ ಉತ್ತರ ನೀಡಲು ಸಾಧ್ಯವಾಗಿರಲಿಲ್ಲ.

ಇದೇ ರೀತಿಯಲ್ಲಿಯೇ ಕಲಾ ವಿಭಾಗದಲ್ಲಿ ಟಾಪರ್ ಆಗಿದ್ದ ರೂಬಿಯಾ ಕೂಡ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ನೀಡಿರಲಿಲ್ಲ. ಇದರಿಂದಾಗಿ ಬಿಹಾರ ಪರೀಕ್ಷಾ ಮಂಡಳಿಯಲ್ಲಿ ನಡೆದಿದ್ದ ದೊಡ್ಡ ಹಗರಣವೊಂದು ಬೆಳಕಿಗೆ ಬಂದಿತ್ತು. ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿತ್ತು. ಅಲ್ಲದೆ, ಸಾಕಷ್ಟು ವಿದ್ಯಾರ್ಥಿಗಳನ್ನು ಹಾಗೂ ಅಧಿಕಾರಿಗಳನ್ನು ಬಂಧನಕ್ಕೊಳಪಡಿಸಲಾಗಿತ್ತು.

No Comments

Leave A Comment