Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಈಗ ಗಾಂಧಿ ಮಾಯ, ಚರಕದೊಂದಿಗೆ ಪ್ರಧಾನಿ ಮೋದಿ ಪೋಸ್!

ನವದೆಹಲಿ: ಇದೊಂದು ಅಚ್ಚರಿಯ ಬೆಳವಣಿಗೆ ಎಂಬಂತೆ ಖಾದಿ ವಿಲೇಜ್ ಇಂಡಸ್ಟ್ರೀಸ್ ಕಮಿಷನ್ ಪ್ರಕಟಿಸಿರುವ 2017ನೇ ಇಸವಿಯ ಕ್ಯಾಲೆಂಡರ್ ಮತ್ತು ಡೈರಿಗಳಲ್ಲಿ ಚರಕ ನೂಲುತ್ತಿರುವ ಮಹಾತ್ಮ ಗಾಂಧಿ ಚಿತ್ರದ ಬದಲು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಪ್ರಕಟಗೊಂಡಿದೆ!

ಕ್ಯಾಲೆಂಡರ್ ಮತ್ತು ಡೈರಿಗಳಲ್ಲಿ ಮುಖಪುಟದಲ್ಲಿನ ಚಿತ್ರದಲ್ಲಿ ನೂಲು ನೇಯುತ್ತಿರುವ ಪೋಸ್ ನಲ್ಲಿ ಗಾಂಧಿ ಬದಲು ಮೋದಿ ಫೋಟೋ ಇದೆ. ಚರಕದಲ್ಲಿ ನೂಲು ನೇಯುತ್ತಿರುವುದು ಗಾಂಧಿಯ ಐತಿಹಾಸಿಕ ಚಿತ್ರವಾಗಿದೆ. ಅಷ್ಟೇ ಅಲ್ಲ ಗಾಂಧಿಯ ಈ ಚಿತ್ರ ಈಗಲೂ ಜನಮಾನಸದಲ್ಲಿ ಸ್ಥಿರವಾಗಿ ಉಳಿದುಕೊಂಡಿದೆ.

ಆದರೆ ಸದಾ ಖಾದಿ ಕುರ್ತಾ, ಫೈಜಾಮ, ಕೋಟ್ ಧರಿಸುವ ಪ್ರಧಾನಿ ಮೋದಿ ಈಗ ಗಾಂಧಿ ಸ್ಥಾನವನ್ನು ಪಲ್ಲಟಗೊಳಿಸಿ,ಆಧುನಿಕ ಚರಕದ ಮೂಲಕ ಆ ಸ್ಥಳವನ್ನು ತಾವು ಆಕ್ರಮಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆವಿಐಸಿಯ ಅಧ್ಯಕ್ಷ ವಿನಯ್ ಸಕ್ಸೆನಾ, ನಮ್ಮ ಇಡೀ ಖಾದಿ ಉದ್ಯಮ ಗಾಂಧಿ ತತ್ವದ ಮೇಲೆ ಅವಲಂಬಿತವಾಗಿದೆ. ಗಾಂಧಿಯೇ ಕೆವಿಐಸಿಯ ಜೀವಾಳ. ಹಾಗಾಗಿ ಅವರನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಪ್ರಧಾನಿ ಮೋದಿ ಕೂಡಾ ದೀರ್ಘಕಾಲದಿಂದ ಖಾದಿಯನ್ನು ಬಳಸುತ್ತ ಬಂದಿದ್ದಾರೆ. ಅವರಿಂದಾಗಿಯೂ ಖಾದಿ ಹೆಚ್ಚು ಜನಪ್ರಿಯವಾಗತೊಡಗಿದೆ. ಖಾದಿ ಬಗ್ಗೆ ಅವರದ್ದೇ ಆದ ವೈಶಿಷ್ಟ್ಯತೆ ಇದೆ. ಹಾಗಾಗಿ ಮೋದಿ ಖಾದಿಯ ದೊಡ್ಡ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅವರ ದೂರದರ್ಶಿತ್ವ ಕೆವಿಐಸಿಗೆ ಹೊಂದಾಣಿಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

No Comments

Leave A Comment