Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉತ್ತರ ಪ್ರದೇಶ ರಸ್ತೆ ಅಪಘಾತಗಳಲ್ಲಿ 7 ಸಾವು, ನಾಲ್ವರು ಸೀರಿಯಸ್‌

ಲಖೀಂಪುರ ಖೇರಿ, ಉತ್ತರ ಪ್ರದೇಶ : ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ  ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟು  ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಮೊದಲ ರಸ್ತೆ ಅವಘಡ ನಡೆದದ್ದು ನಿನ್ನೆ ಬುಧವಾರ ತಡರಾತ್ರಿ. ಪಿಲಿಭೀತ್‌ – ಬಸ್ತಿ ಹೈವೇ ಸಮೀಪದ ಮಹಾರಾಜ್‌ನಗರ್‌ ಗ್ರಾಮದಲ್ಲಿ ಜನರ ಗುಂಪೊಂದು ರಸ್ತೆ  ಬದಿ ಬೆಂಕಿ ಹಾಕಿ ಚಳಿ ಕಾಯಿಸುತ್ತಾ ಕುಳಿತಿದ್ದ ವೇಳೆ ಟ್ರ್ಯಾಕ್ಟರ್‌ ಟ್ರಾಲಿಯೊಂದಕ್ಕೆ ಢಿಕ್ಕಿ ಹೊಡೆದ ಟ್ರಕ್‌ ಒಂದು ಚಾಲಕನ ನಿಯಂತ್ರಣ ತಪ್ಪಿ ಜನರ ಮೇಲೆ ಹರಿಯಿತು. ಆಗ ಐವರು ಮೃತಪಟ್ಟರು. ಇತರ ನಾಲ್ವರು ಗಾಯಗೊಂಡರು. ಮೃತರಲ್ಲಿ ನಾಲ್ವರು ಸ್ಥಳದಲ್ಲೇ ಸತ್ತರೆ ಇನ್ನೋರ್ವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಎರಡನೇ ಅವಘಡ ನಡೆದದ್ದು  ಮಾಲ್‌ಪುರ ಸಮೀಪದ ಭಿರಾ ಪಲ್ಲಿಯಾ ರಸ್ತೆಯಲ್ಲಿ. ಎದುರಿನಿಂದ ಬರುತ್ತಿದ್ದ ಟ್ರಕ್ಕಿಗೆ ಕಾರೊಂದು ಮುಖಾಮುಖೀ ಢಿಕ್ಕಿಯಾದಾಗ ಕಾರಿನಲ್ಲಿದ್ದವರ ಪೈಕಿ ಇಬ್ಬರು ಪುರುಷರು ಮೃತಪಟ್ಟರು. ಮೃತರಲ್ಲಿ ಒಬ್ಬರನ್ನು ಪಾಲಿಯಾದಲ್ಲಿ ಎಲ್‌ಐಸಿ ನೌಕರರಾಗಿರುವ ಅತುಲ್‌ 30 ಎಂದು ಗುರುತಿಸಲಾಗಿದೆ. ಇನ್ನೊಬ್ಬರು ಗುರುತು ಪತ್ತೆಯಾಗಿಲ್ಲ.

 

No Comments

Leave A Comment