Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ತಮಿಳುನಾಡಿನಲ್ಲಿ ಈ ವರ್ಷವೂ ಜಲ್ಲಿಕಟ್ಟು ಇಲ್ಲ: ಸಂಕ್ರಾಂತಿಗೆ ಮುನ್ನ ತೀರ್ಪು ನೀಡಲು ‘ಸುಪ್ರೀಂ’ ನಕಾರ

ನವದೆಹಲಿ: ಸಂಕ್ರಾಂತಿ ಸುಗ್ಗಿಯ ಸಂದರ್ಭದಲ್ಲಿ ತಮಿಳುನಾಡಿನ ಪ್ರಮುಖ ಆಚರಣೆಯಾದ ಗೂಳಿ ಓಡಿಸುವ ಆಟ ಜಲ್ಲಿಕಟ್ಟಿಗೆ ಅವಕಾಶ ನೀಡಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಳ್ಳಿ ಹಾಕಿದೆ.

ನ್ಯಾಯಾಲಯ ಮಧ್ಯೆ ಪ್ರವೇಶಿಸಿ ಜಲ್ಲಿಕಟ್ಟು ಆಚರಣೆಗೆ ಅನುವು ಮಾಡಿಕೊಡಬೇಕೆಂಬ ಮನವಿಯನ್ನು ಇಂದು ತಿರಸ್ಕರಿಸಿರುವ ನ್ಯಾಯಾಲಯ, ‘ಈ ಕುರಿತು ಕರಡನ್ನು ರಚಿಸಲಾಗಿದೆ. ಆದರೆ ಶನಿವಾರದೊಳಗೆ ತೀರ್ಪು ನೀಡಲು ಸಾಧ್ಯವಿಲ್ಲವೆಂದು’ ಹೇಳಿದೆ. ಅಲ್ಲದೆ ಜಲ್ಲಿಕಟ್ಟಿಗೆ ಸಂಬಂಧಿಸಿದಂತೆ ನ್ಯಾಯಪೀಠ ಆದೇಶ ಹೊರಡಿಸುವುದು ಸಮಂಜಸವಲ್ಲ ಎಂದು ಕೂಡ ಹೇಳಿದೆ. ಇದರಿಂದಾಗಿ ತಮಿಳುನಾಡಿನಲ್ಲಿ ಈ ವರ್ಷ ಸಂಕ್ರಾಂತಿಗೆ ಜಲ್ಲಿಕಟ್ಟು ನಡೆಯುವುದು ಸಂಶಯವಾಗಿದೆ.

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ತಮಿಳಿಸೈ ಸೌಂದರಾಜನ್ ಅವರು, ಪೊಂಗಲ್ ಗೆ ಮೊದಲು ಸುಪ್ರೀಂ ಕೋರ್ಟ್ ತೀರ್ಪು ನೀಡಲು ನಿರಾಕರಿಸಿರುವುದಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಜಲ್ಲಿಕಟ್ಟನ್ನು ನಿಷೇಧಿಸಿರುವುದರಿಂದ ಕಳೆದ ಎರಡು ವರ್ಷಗಳಿಂದ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆ ತಾತ್ಕಾಲಿಕವಾಗಿ ನಿಂತಿದೆ. ಪ್ರಾಣಿಗಳಿಗೆ ತೀವ್ರ ಹಿಂಸೆಯಾಗುತ್ತದೆ ಎಂದು ಪ್ರಾಣಿದಯಾ ಸಂಘಗಳು ವಿರೋಧಿಸಿ ಅರ್ಜಿ ಹಾಕಿದ್ದವು.

No Comments

Leave A Comment