Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ- ಅಜಾಗರೂಕ ಚಾಲಕರ ಡಿಎಲ್ ಅಮಾನತು ಮಾಡಿ

ನವದೆಹಲಿ: ‘ಅತಿವೇಗ, ಸಿಗ್ನಲ್‌ ಉಲ್ಲಂಘನೆ, ಚಾಲನೆ ವೇಳೆ ಮೊಬೈಲ್‌ ಬಳಕೆ ಸೇರಿದಂತೆ ವಾಹನವನ್ನು ಅಜಾಗರೂಕವಾಗಿ ಚಾಲನೆ ಮಾಡುವವರ ಚಾಲನಾ ಪರವಾನಗಿಯನ್ನು (ಡ್ರೈವಿಂಗ್‌ ಲೈಸೆನ್ಸ್–ಡಿಎಲ್‌) ಕನಿಷ್ಠ ಮೂರು ತಿಂಗಳವರೆಗೆ ಅಮಾನತಿನಲ್ಲಿಡಿ’ ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ರಸ್ತೆ ಅಪಘಾತಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಸಲುವಾಗಿ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ಇಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿಯ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ.

ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ಸಾರಿಗೆ ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು.

‘ಬೇಜವಾಬ್ದಾರಿಯುತ ಚಾಲನೆ ಮಾಡುವವರ ಪರವಾನಗಿಯನ್ನು ಅಮಾನತು ಮಾಡಲು ಮೋಟಾರು ವಾಹನ ಕಾಯ್ದೆಯ 19ನೇ ಸೆಕ್ಷನ್ ಅಡಿ ಅವಕಾಶವಿದೆ. ಹೀಗಾಗಿ ಅಂತಹ ಚಾಲಕರ ಪರವಾನಗಿ ಅಮಾನತು ಮಾಡಲು ರಾಜ್ಯ ಸರ್ಕಾರಗಳು ಹಿಂದೇಟು ಹಾಕಬಾರದು’ ಎಂದು ತಿಳಿಸಲಾಗಿದೆ.

‘ಚಾಲನಾ ಪರವಾನಗಿಯನ್ನು ಪಡೆಯಲು ಅನುಸರಿಸಬೇಕಾದ ನಿಯಮಗಳು ಮತ್ತು ಪ್ರಕ್ರಿಯೆಯನ್ನು ಕಠಿಣಗೊಳಿಸಿ. ಸಂಪೂರ್ಣ ಗಣಕೀಕೃತ ಮತ್ತು ಸಂವೇದಕಗಳು ಇರುವ ಪಥಗಳಲ್ಲೇ ಚಾಲನಾ ಪರೀಕ್ಷೆ ನಡೆಸಬೇಕು’ ಎಂದು ಸೂಚಿಸಲಾಗಿದೆ.

No Comments

Leave A Comment